ದಾರಿಗಾಗಿ ಆಗ್ರಹಿಸಿ ನಡೆದ ಅಹೋ ರಾತ್ರಿ ಧರಣಿ ಅಂತ್ಯ
ತಾಳಿಕೋಟೆ:ಮಾ.14: ತಾಲೂಕಿನ ಪತ್ತೇಪೂರ ಪಿಟಿ ಗ್ರಾಮದ ವ್ಯಾಪ್ತಿಯ ರೈತರ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಿಸಿ ತಹಶೀಲ್ದಾರ ಕಚೇರಿ ಮುಂಭಾಗದಲ್ಲ್ದಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನದಂದು ಬುಧವಾರರಂದು ಹಿಂಪಡೆಯಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ­ ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.
ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಶ್ರೀಮತಿ ಕೀರ್ತಿ ಚಾಲಕ ಇವರು ಕೂಡಲೇ ದಾರಿ ಮಾಡಿ ಕೊಡಲು ಪ್ರಾರಂಭಿಸಲಾಗುವುದು ಕಾರಣ ಧರಣಿ ಕೈ ಬಿಡಿ ಎಂದು ಮನವಿ ಮಾಡಿಕೊಂಡ ಹಿನ್ನೇಲೆಯಲ್ಲಿ ಮತ್ತು ದಾರಿ ಮಾಡಿಕೊಡಲು ಪ್ರಾರಂಬಿಸಿದ ಕಾರಣ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು ಅಂದು ಮದ್ಯಾಹ್ನ 3 ಘಂಟೆಗೆ ಪೋಲಿಸ್ ಬಂದು ಬಸ್ತಿಯಲ್ಲಿ ತಹಶೀಲ್ದಾರ ನೇತೃತ್ವದಲ್ಲಿ ದಾರಿ ಮಾಡಿ ಕೊಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಬದಲ್ಲಿ ಮಾತನಾಡಿದ ಅರವಿಂದ ಕುಲಕರ್ಣಿ ಅವರು ಅಖಂಡ ಕರ್ನಾಟಕ ರೈತ ಸಂಘದ ಹೋರಾಟಕ್ಕೆ ಸಂದ ಜಯವಾಗಿದೆ ಮತ್ತು ಧರಣಿ ಸಂದರ್ಭದಲ್ಲಿ ಸಹಕಾರ ನೀಡಿದ ತಹಶೀಲ್ದಾರ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ದ್ಯಾಮನಗೌಡ ಹಾದಿಮನಿ, ಶ್ರೀನಿವಾಸ ಗೊಟಗುಣಕಿ, ಮಲ್ಲನಗೌಡ ದೇವರಡ್ಡಿ, ತಾಲೂಕಾ ಉಪಾಧ್ಯಕ್ಷ ಶಿವಯೋಗಿ ಗೊಟಗುಣಕಿ, ಮಲ್ಲಣ್ಣ ಸಿಂಗನಳ್ಳಿ, ಮಡಿವಾಳವ್ವ ಮಾರಲಭಾವಿ, ಲಕ್ಷ್ಮೀಬಾಯಿ ಗೊಟಗುಣಕಿ, ಗಂಗಮ್ಮ ಸಿಂಗನಳ್ಳಿ, ಮೊದಲಾದವರು ಇದ್ದರು.