ಸಂಸ್ಕಾರಯುತ ವ್ಯಕ್ತಿತ್ವವನ್ನುರೂಪಿಸುವುದು ಶಿಕ್ಷಣದ ಉದ್ದೇಶ:ಜುನಗೊಂಡ
ತಾಳಿಕೋಟೆ:ಮಾ.14: ಸಂಸ್ಕಾರಯುತ ವ್ಯಕ್ತಿತ್ವವನ್ನುರೂಪಿಸುವುದು ಶಿಕ್ಷಣದ ಉದ್ದೇಶ, ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ಪ್ರಶಿಕ್ಷಣಾರ್ಥಿಗಳನ್ನು ಅನುಭವ ಶಾಲಿಗಳನ್ನಾಗಿಸಿ ಸಂಸ್ಕಾರಯುತ ನಾಗರೀಕರನ್ನಾಗಿ ಪರಿವರ್ತಿಸುತ್ತವೆ ಎಂದು ವಿಜಯಪುರದ ಅಂಕಣಕಾರ ಮಂಜುನಾಥ ಎಮ್. ಜುನಗೊಂಡ ಅವರು ಹೇಳಿದರು.
ಬುಧವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ಪ್ರಥಮ ವರ್ಷದ ಶಿಕ್ಷಕ ವಿದ್ಯಾರ್ಥಿಗಳ ಸ್ವಾಗತ ಹಾಗೂ 2023-24 ನೇ ಸಾಲಿನ ಶಿಕ್ಷಕ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸಮಕಾಲೀನ ಜಗತ್ತು ಸ್ಪರ್ಧಾತ್ಮಕತೆಯಿಂದಕೂಡಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜ್ಞಾನ ನೀಡುವುದರ ಮೂಲಕ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವಗಳನ್ನು ಬೆಳೆಸುವ ಬಹುದೊಡ್ಡಜವಾಬ್ದಾರಿ ಹೊಂದಿದೆ. ಪ್ರಶಿಕ್ಷಣಾರ್ಥಿಗಳು ತನ್ನ ಓದಿನ ಜೊತೆಗೆ ತನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳು ಮೇಲೆ ಅಪಾರವಾದ ಜವಾಬ್ದಾರಿ ಇದ್ದು ಅದನ್ನು ಸಮರ್ಥವಾಗಿ ನಿಭಾಯಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಕ್ಷಣ ಮಹಾ ವಿಧ್ಯಾಲಯದ ಪ್ರಾಚಾರ್ಯ ಡಾ.ಆರ್.ಎಮ್.ಬಂಟನೂರ ಅವರು ಮಾತನಾಡಿ ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪ್ರಗತಿಯೆಡಗೆ ಕೊಂಡೂಯ್ಯಬಲ್ಲ ಏಕೈಕ ನೇತಾರನೇ ಶಿಕ್ಷಕ ಇಂತಹ ವೃತ್ತಿ ಪವಿತ್ರವಾದುದ್ದಾಗಿದೆ ಇದನ್ನು ನಿಭಾಯಿಸುವ ಸಹನ ಶಕ್ತಿ ವಿಧ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕಾಶೀನಾಥ ಎಸ್. ಮುರಾಳ, ಶಂಕರಗೌಡ ಹಿಪ್ಪರಗಿ, ಕೆ.ಸಿ.ಸಜ್ಜನ, ವೇ.ಮುರುಘೇಶ ವಿರಕ್ತಮಠ, ಸಿ.ಆರ್.ಕತ್ತಿ, ಅಶೋಕ ಜಾಲವಾದಿ, ಎಮ್.ಆರ್. ಕತ್ತಿ, ಎಸ್.ಎಮ್.ಇಂಬ್ರಾಹಿಪುರ, ಎಸ್.ಎಮ್.ಕತ್ತಿ, ಕಾಲೇಜನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಪ್ರೀಯಾ ಹುಗಾರ ಹಾಗೂ ಐಶ್ವರ್ಯ ಮಡಿವಾಳರ ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯದ್ಯಕ್ಷರಾದ ಯು.ಎನ್.ಮಂಗೊಂಡ ಸ್ವಾಗತಿಸಿ ಪರಿಚಯಿಸಿದರು. ಮೌನೇಶಕೆಲ್ಲೂರ ವಂದಿಸಿದರು ವಾಯ್.ಎಚ್. ಅಂಗಡಗೇರಿ ನಿರೂಪಿಸಿದರು.