ರಾಜ್ಯಮಟ್ಟಕ್ಕೆ ಆಯ್ಕೆ
ತಾಳಿಕೋಟೆ:ಮಾ.14: ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಿಕ್ಷಕ ಸಿದ್ಧನಗೌಡ ಕಾಶಿನಕುಂಟಿ, 100><4 ರಿಲೇ, ಮತ್ತು ಕಬಡ್ಡಿಯಲ್ಲಿ ಪ್ರಥಮ, ಶಿಕ್ಷಕ ಕಿರಣಕುಮಾರ್ ಎನ್ ಕೆ 100 ಮೀ ಓಟ, 100><4 ರಿಲೇ ಪ್ರಥಮ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ನವೀನಕುಮಾರ ಸಂ ಇಜೇರಿ 200 ಮೀ ಓಟ, 100><4 ರಿಲೇ ಪ್ರಥಮ, ಮಂಜುನಾಥ ಗು ನರಸಣಗಿ ವೆಟ್ ಲಿಫ್ಟಿಂಗ್, 100><4 ರಿಲೇ ಪ್ರಥಮಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.