ಸರಿಯಾದ ಸದುಪಯೋಗ ನಮ್ಮದಾಗಬೇಕು
ಸೈದಾಪುರ:ಮಾ.14:ದೇಶದ ಪ್ರಮುಖ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲೊಂದಾದ ತಿರುಪತಿಗೆ ನೂತನ ಬಸ್ ಸಂಚಾರವು ನಮ್ಮ ಪಟ್ಟಣದ ಮೂಲಕ ಆರಂಭಿಸಿರುವುದು ಅತ್ಯಂತ ಸಂತೋಷ ಮತ್ತು ಶ್ಲಾಘನೀಯವಾಗಿದೆ ಇದರ ಸರಿಯಾದ ಸದುಪಯೋಗ ನಮ್ಮದಾಗಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಯಾದಗಿರಿ ಯಿಂದ ತಿರುಪತಿಗೆ ತೆರಳುವ ಬಸ್‍ಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು ಈ ವೇಳೆ ಮಾತನಾಡಿದ ಅವರು. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರಾದ ರಾಚಪ್ಪ ಅವರನ್ನು ಸಂಪರ್ಕಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಸ್ ಸಂಪರ್ಕ ಕಲ್ಪಿಸಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು. ಪಟ್ಟಣದ ಪ್ರಯಾಣಿಕರು ರಾಜ್ಯ ಮತ್ತು ಅಂತರಾಜ್ಯದ ಮಹಾನಗರಗಳಿಗೆ ತೆರಳಲು ಯಾದಗಿರಿ ಇಲ್ಲವೇ ಪಕ್ಕದ ಜಿಲ್ಲೆ ರಾಯಚೂರಿಗೆ ತೆರಳವುದು ಅನಿವಾರ್ಯವಾಗಿದೆ. ಆದರಿಂದ ಹುಬ್ಬಳಿ, ಉಡಪಿ, ವಿಜಯಪುರ ಸೇರಿದಂತೆ ಇತರ ಮಹಾನಗರಗಳಿಗೆ ಬಸ್ಸ್ ಸಂಚಾರ ಆರಂಭಿಸಬೇಕು. ಈ ಪ್ರದೇಶ ಜಿಲ್ಲೆಯ ಪ್ರಮುಖ ವ್ಯಾಪರ ಕೇಂದ್ರ ಮತ್ತು ಸಮೀಪದಲ್ಲಿ ಕಡೇಚೂರ-ಬಾಡಿಯಾಲ ಕೈಗಾರಿಕಾ ಪ್ರದೇಶವಿರುವುದರಿಂದ ಸರಕು ಸಾಗಣಿಕೆಯ ನಮ್ಮ ಕಾರ್ಗೋ ಸೇವೆಯು ಇಲ್ಲಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಗುರುಮಠಕಲ್ ಬಸ್ ಘಟಕದ ವ್ಯವಸ್ಥಾಪಕ ಪ್ರವೀಣ ಯರನಾಳ, ಹಿರಿಯ ಮುಖಂಡ ಚಂದ್ರಶೇಖರ ವಾರದ್, ಕಸಾಪ ವಲಯಾಧ್ಯಕ್ಷ ಮಹಿಪಾಲರೆಡ್ಡಿ ದುಪ್ಪಲ್ಲಿ, ಗ್ರಾಪಂ ಶರಣಪ್ಪ ಬೈರಂಕೊಂಡಿ, ಶಿವಕುಮಾರ ಹೂಗಾರ್, ವೆಂಕಟೇಶ ಗಡದ್, ಬನ್ನಪ್ಪ ಹುಲಿಬೆಟ್ಟ, ಧಶರಥ ಸೈದಾಪುರ, ಶೇಕಪ್ಪ ಬಾಲಛೇಡ್, ತಾಯಪ್ಪ ಚಿಗರಿ, ಶರಣಪ್ಪ ಹುಲಿನಾಯಕ್, ಅಂಜನೇಯ ಕಾವಲಿ, ವಿಜಯ ಕಂದಳ್ಳಿ, ಪುಂಡಲೀಕ ಗೊಂದಡಗಿ, ತಿಮ್ಮರೆಡ್ಡಿ ಬೆಳಗುಂದಿ, ಪ್ರಕಾಶ ಜೇಗರ್, ಹಿಮಾಮ್ ಹುಸೇನ್ ಸಾಬ್, ರಾಜ್ ಸಾಬ್ ಕಣೇಕಲ್, ಸಾರಿಗೆ ಇಲಾಖೆಯ ಅಧಿಕಾರಿಗಳಾದ ಮೈಹಿಮೂದ್, ಮಂಜುನಾಥ್, ಅಯ್ಯಪ್ಪ ಕಟ್ಟಿಮನಿ ಸೇರಿದಂತೆ ಇತರರಿದ್ದರು.