ಒಂದೇ ಭಾರತ ರೈಲನ್ನು ಬೀದರ ದಿಂದ ಗುಲಬರ್ಗಾ ಮಾರ್ಗವಾಗಿ ಬೆಂಗಳೂರಿಗೆ ಹೊರಡಿಸಲು ಮನವಿ
ಬೀದರ:ಮಾ.14:ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಸಮಿತಿ ಮಯಿಂದ ಕೇಂದ್ರ ಸರ್ಕಾರವು ಒಂದೆ ಭಾರತ ರೈಲನ್ನು ಗುಲಬರ್ಗಾ ದಿಂದ ಬೆಂಗಳೂರಿಗೆ ಪ್ರಾರಂಭಿಸಿರುವುದು ಬಹಳ ಸಂತೋಷದ ವಿಷಯವಾಗಿದ್ದು, ಇದರಿಂದ ಕಲಬುರ್ಗಿ ಜನರಿಗೆ ಬಹಳ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಂಡ ಕಾರ್ಯವಾಗಿದೆ. ಒಂದೇ ಭಾರತ ರೈಲನ್ನು ಕರ್ನಾಟಕ ರಾಜ್ಯದಲ್ಲಿಯೇ ಅತಿ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊಂದಿರುವ ಬೀದರ್ ದಿಂದ ಗುಲಬರ್ಗಾ ಮಾರ್ಗವಾಗಿ ಬೆಂಗಳೂರಿಗೆ ಸಂಚಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಲ್ಲಿ ಬೀದರ ಜಿಲ್ಲೆಯ ಪ್ರಯಾಣಿಕರಿಗೂ ಕೂಡ ಅನುಕೂಲವಾಗುತ್ತಿರುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಸದರಿ ಬೀದರ ಜಿಲ್ಲೆಯಿಂದ ದಿನಾಲೂ ಸಾವಿರಾರೂ ಜನರು ತಮ್ಮ ಸರ್ಕಾರಿ ಹಾಗೂ ಇತರೆ ಕೆಲಸಗಳಿಗಾಗಿ ರಾಜ್ಯದ ರಾಜ್ಯ ಧಾನಿಯಾದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾ ಬರುತ್ತಿದ್ದಾರೆ.
ಬೀದರ ಜಿಲ್ಲೆಯ ಸಾರ್ವಜನಿಕರ ಹಿತ ದೃಷ್ಟಿಯಿಂದ ಒಂದೇ ಭಾರತ ರೈಲನ್ನು ಗುಲಬರ್ಗಾದಿಂದ ಬೆಂಗಳೂರಿಗೆ ಹೊರಡುವ ಬದಲಾಗಿ ಬೀದರ ದಿಂದ ಗುಲಬರ್ಗಾ ಮಾರ್ಗವಾಗಿ ಬೆಂಗಳೂರಿಗೆ ಹೊರಡಿಸುವ ನೀಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಸಮಿತಿ À ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಪೀಟರ್ ಚಿಟಗುಪ್ಪಾ, ಜಿಲ್ಲಾ ಗೌರವಾಧ್ಯಕ್ಷರಾದ ಸೈಯದ್ ನವಾಜ್, ಮೋಸಿನ ಪಟೇಲ್, ಗುರುರಾಜ ಮೇತ್ರೆ, ಚಂದ್ರಕಾಂತ ಪೆÇೀಳ, ನಿಲೇಶ ರಾಠೋಡ್, ಯೋಹಾನ ಮೀಸೆ, ಮೊಜೇಸ್, ಶಾಂತಕುಮಾರ್ ಘಂಟೆ, ಸಾಲೋಮನ್ ರಾಜ್, ಶಾಮ್ ಕಡ್ಯಾಳ, ರಾಜಕುಮಾರ್ ಮೇಲ್ದೋಡಿ ಇದ್ದರು