ವಿಜಯಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆಜಿಪಂ ಸಿಇಒ ಭೇಟಿ, ಪರಿಶೀಲನೆ
ವಿಜಯಪುರ,ಮಾ.14 :ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಬುಧವಾರ ವಿಜಯಪುರ ತಾಲೂಕಿನ ಐನಾಪೂರ ಹಾಗೂ ಮದಭಾವಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಐನಾಪೂರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಗೋ ಶಾಲೆ ಕಾಮಗಾರಿ ಹಾಗೂ ಬೋರವೆಲ್ ರೀಚಾರ್ಜ್ ಕಾಮಗಾರಿ ಪರಿಶೀಲಿಸಿದರು.
ಮದಭಾವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕೂಸಿನ ಮನೆ, ಗ್ರಂಥಾಲಯ ಹಾಗೂ ತೆರೆದ ಬಾವಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ರೂಪುರೇಷೆ ಸಿದ್ಧಪಡಿಸಿಕೊಂಡು ಕಾರ್ಯ ನಿರ್ವಹಿಸಿ, ನರೇಗಾ ಯೋಜನೆಯಡಿ ಮೂರು ಬಾವಿಗಳು ಅನುಷ್ಠಾನಗೊಂಡಿದ್ದು, ಸಮರ್ಪಕ ಕುಡಿಯುವ ನೀರು ಒದಗಿಸಬೇಕು. ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ., ತಾಂತ್ರಿಕ ಸಂಯೋಜಕ ಪಿ.ಎ. ಶಾಹಾಪೂರ, ಮದಭಾವಿ ಗ್ರಾ.ಪಂ. ಪಿ.ಡಿ.ಒ ಎಸ್.ಆರ್.ಕಟ್ಟಿ ಹಾಗೂ ಉಪಾಧಕ್ಷ ಕನ್ನಪ್ಪ ಪೂಜಾರಿ, ಐನಾಪೂರ ಗ್ರಾ.ಪಂ. ಪಿ.ಡಿ.ಒ. ಧನಸಿಂಗ್ ರಾಠೋಡ ಹಾಗೂ ಗ್ರಾ.ಪಂ. ಅಧ್ಯಕ್ಷ ಮಾದೇವ ರಾಠೋಡ, ತಾಂತ್ರಿಕ ಸಹಾಯಕರುಗಳಾದ ರವಿಶಂಕರ ಮಾಳಗೆ, ಶುಭಂ ಬಿರಾದಾರ ಉಪಸ್ಥಿತರಿದ್ದರು.