ಮಹಾನಗರಪಾಲಿಕೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿ ನಿರ್ಮಿಸಲು ಮನವಿ
ವಿಜಯಪುರ,ಮಾ.14:ಮಹಾನಗರ ಪಾಲಿಕೆಯ ಒಳಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ (ಮೂರ್ತಿ) ಸ್ಥಾಪÀನೆ ಮಾಡಲು ಒತ್ತಾಯಿಸಿ ಇಲ್ಲಿನ ಭೀಮ ಸರಕಾರ ಸಂಘಟನಾ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭೀಮ ಸರಕಾರ ಸಂಸ್ಥಾಪಕರು ಮತ್ತು ಜಿಲ್ಲಾಧ್ಯಕ್ಷರು ಪರಶುರಾಮ ಚಲವಾದಿ ಅವರು ಮಾತನಾಡಿ ಮಹಾನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಸಂವಿದಾನವನ್ನು ಮತ್ತು ಬಡವರ ಎಲ್ಲ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿರುವಂತಹ ಮಹಾನಾಯಕ ಅಂಬೇಡ್ಕರ ಪುತ್ಥಳಿಯನ್ನು ಒಳಾಂಗಣದಲ್ಲಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಹುಲ್ ಮಾನಕರ, ಉದಯಕುಮಾರ ಆಕಾಶ, ಇಸ್ಮಾಯಿಲ್ ಬೀಳಗಿ, ರಾಜು ಬುರ್ಲಿ, ಲಕ್ಷ್ಮಣ ಬ್ಯಾಲ್ಯಾಳ, ರಫೀಕ ಚಟ್ಟರಕಿ ಮತ್ತಿತರರು ಉಪಸ್ಥಿತರಿದ್ದರು.