ಜಿಲ್ಲೆಯಲ್ಲಿ ಒಟ್ಟು ಪ್ರದೇಶದ 0.20 ಹೇಕ್ಟರ್ ಪ್ರದೇಶದಲ್ಲಿ ಅರಣ್ಯಾಭಿವೃದ್ಧಿ
ಇಂಡಿ:ಮಾ.14:ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು ಪ್ರದೇಶದಲ್ಲಿ ಈ ಹಿಂದೆ 0.17 ಅರಣ್ಯ ಪ್ರದೇಶವಿದ್ದದ್ದು ಈಗ 0.20 ಹೇಕ್ಟರ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಯಾಗಿದೆ ಎಂದು
ಸಾಮಾಜಿಕ ಅರಣ್ಯ ವಿಭಾಗ ವಿಜಯಪೂರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಹೇಳಿದರು.
ಸಾಮಾಜಿಕ ಅರಣ್ಯ ವಲಯ ವತಿಯಿಂದ ತಾಲೂಕಿನ ಬಬಲಾದ ನರ್ಸರಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಯುವ ಜನತೆಗೆ ದುಡಿಯುವ ಕೈಗಳಿಗೆ ಉತ್ತಮ ಬೆಳವಣೆಗೆಗೆ ಹಾಗೂ ಅದರಲ್ಲೂ ಸಮಾಜದ ಅಂಚಿನಲ್ಲಿರುವ ಗುಂಪುಗಳ ಅಂತರ್ಗತ ಬೆಳವಣೆಗೆಯನ್ನು ವೃದ್ಧಿಸಲು ಎಲ್ಲ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೇ ಸೂರನಡಿ ಸೃಜಿಸಲಾಗಿರುತ್ತದೆ ಎಂದರು.
ಇಂಡಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ರೇಷ್ಮೆ ಇಲಾಖೆಯ ತೇಲಿ, ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ನಾದ, ರಾಜೇಂದ್ರ ಹುನ್ನೂರ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್ ಹಾಗೂ ದಾಂಡೇಲಿ ಪೇಪರ್ ಮಿಲ್ಸ ಅಧಿಕಾರಿ ಇಮ್ರಾನ್ ರವರು ಭಾಗವಹಿಸಿದ್ದರು.
ಈ ಕಾರ್ಯಾರದಲ್ಲಿ ಬಬಲಾದ, ಹಳಗುಣಕಿ, ಸೊನಕನಳ್ಳಿ, ಬರಡೋಲ, ಬೋಳೆಗಾಂವ, ಜೇವೂರ ಮುಂತಾದ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.
ಕೃಷಿಯೊಂದಿಗೆ ಅರಣ್ಯ ಬೆಳೆಸುವುದು, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಣ್ಣಿನ ಬೆಳೆಗಳನ್ನು ಬೆಳೆಯುವುದು, ಭೂಮಿಯ ಫಲವತ್ತತೆ ಹೆಚ್ಚಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು. ರೈತರೊಂದಿಗೆ ನೇರ ಸಂವಾದ ನಡೆಯಿತು. ನಂತರ ಭಾಗವಹಿಸಿದ ರೈತರಿಗೆ ಟೋಪಿ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯ ಡಿ ಎ ಮುಜಗೊಂಡ ಸ್ವಾಗತಿಸಿ, ವಂದಿಸಿದರು.