ಖೂಬಾ ಅಭಿಮಾನಿಗಳಿಂದ ಸಂಭ್ರಮಾಚರಣೆ
ಔರಾದ್ :ಮಾ.14: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಬಲ ಆಕಾಂಕ್ಷಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಭಗವಂತ ಖೂಬಾ ಆಯ್ಕೆಯಾದ ಪ್ರಯುಕ್ತ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಕನ್ನಡಾಂಬೆ ವೃತ್ರದಲ್ಲಿ ಭಾಜಪಾ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಉತ್ತಮ ವ್ಯಕ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ. ತನ್ನ ಜೀವಮಾನದಲ್ಲಿ ಯಾವುದೇ ಆರೋಪ ಇಲ್ಲದೆ ನಿಷ್ಕøಷ್ಟವಾಗಿ ಪ್ರಾಮಾಣಿಕವಾಗಿ ಸೇವೆ ಮಾಡುವ ಅಭಿವೃದ್ಧಿ ಚಿಂತಕರಿಗೆ ಅವಕಾಶ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನುಡಿದಂತೆ ಅಭಿವೃದ್ಧಿಪರ ಮಾಡುತ್ತಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ, ಬೀದರನಿಂದ ಭಗವಂತ ಖೂಬಾ ಅವರು ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾಜಪಾ ಹಿರಿಯ ಧುರೀಣ ಶರಣಪ್ಪ ಪಂಚಾಕ್ಷರಿ, ಅಮರ ಏಡವೆ, ಸಂಗಯ್ಯ ಸ್ವಾಮಿ, ವಿರೇಂದ್ರ ಮೀಸೆ, ಸಚಿನ ಏಡವೆ, ಶ್ರೀಕಾಂತ ಅಲ್ಮಾಜೆ, ಪ್ರವೀಣ ಗಾದೆವಾರ ರಾಜಕುಮಾರ ರಾಗಾ, ರಾಜಕುಮಾರ ಚಿದ್ರೆ, ಸಂತೋಷ ಪಾಟೀಲ, ಚನ್ನಬಸವ ಗಜರೆ, ಸಚಿನ ಪಂಚಾಕ್ಷರಿ, ಸಂದೀಪ ಪಾಟೀಲ, ಕರಿಂ ಪಠಾನ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.