ಸರೋಜ ಸಂಗೀತ ಸಮಾರೋಹ
ಕಲಬುರಗಿ:ಮಾ.14:ನೂತನ ವಿದ್ಯಾಲಯ ಸಂಸ್ಥೆಯ ಪದವಿ ಹಾಗೂ ಸ್ನಾತಕೋತ್ತರ ಸಂಗೀತ ಕೇಂದ್ರ ಕಲಬುರಗಿ ಹಾಗೂ ಸ್ವರ ಗಂಧರ್ವ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ದಿನಾಂಕ 16-03-2024 ಹಾಗೂ ರವಿವಾರ ದಿನಾಂಕ 17-03-2024 ರಂದು ಪ್ರತಿ ದಿನ ಸಾಯಂಕಾಲ 4:00 ಗಂಟೆಗೆ ಸರೋಜ ಸಂಗೀತ ಸಮಾರೋಹ -2024 ನ್ನು ಸಂಗಮೇಶ್ವರ ಸಭಾಗೃಹದ ಕೆಳಮಹಡಿಯಲ್ಲಿ ಆಯೋಜಿಸಲಾಗಿದೆ. ದಿನಾಂಕ 16-03-2024 ರಂದು ಧಾರವಾಡದ ಪ್ರಸಿದ್ಧ ಗಾಯಕರಾದ ಪಂಡಿತ ಶೇಷಗಿರಿ ನಾ. ದಂಡಾಪೂರ ಇವರು ಸಂಗೀತ ಸಮಾರೋಹದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಸ್ವಾಮಿರಾವ ಕುಲಕರ್ಣಿ, ನೂತನ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಭಿಜಿತ ದೇಶಮುಖ, ಹಾಗೂ ಶ್ರೀ ಶರದ ಕೊಲ್ಹಾರಕರ್, ಶ್ರೀಮತಿ ಸರೋಜ ಅನಗರಕರ ಅವರ ಪ್ರ ಪ್ರಥಮ ಶಿಷ್ಯರಾದ ಶ್ರೀ ಮಾಧವ ಜೋಶಿ ಅವರು ಆಗಮಿಸಲಿದ್ದಾರೆ. ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಗೌತಮ ಆರ್. ಜಹಾಗಿರದಾರ್ ಇವರು ಸಮಾರೋಹದ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ದಿ. ಶ್ರೀಮತಿ ಸರೋಜ ಅನಗರಕರ ಶಿಷ್ಯ ವೃಂದದÀವರಿಂದ ಸ್ವರ ನಮನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 17-03-2024 ರಂದು ಶಿಷ್ಯವೃಂದದವರ ಕಾರ್ಯಕ್ರಮ, ನಂತರ ವಿಶೇಷ ಆಮಂತ್ರಿತರಾದ ಕುಮಾರ ಅನಿರುದ್ಧ ಐತಾಳ ಬೆಂಗಳೂರು ಆಕಾಶವಾಣಿಯ “ಏ” ಶ್ರೇಣಿ ಕಲಾವಿದರಿಂದÀ ಸ್ವರ ನಮನ ಸಂಗೀತ ಕಾರ್ಯಕ್ರಮ