ಜಿಂದಾಲ್ , ಜೆಟಿಸಿ ಕಂಪನಿಗಳಿಂದ ಸುಶೀಲಾನಗರ ಗ್ರಾ.ಪಂ. ಜನರಿಗೆ ಧೂಳು
ಸಂಜೆವಾಣಿ ವಾರ್ತೆ
ಸಂಡೂರು: ಮಾ:14 : ತಾಲೂಕಿನ ರಾಮನಮಲೈ ಪ್ರದೇಶದಲ್ಲಿ ಬರುವ ಜಿಂದಾಲ್ ಹಾಗೂ ಜೆಟಿಸಿ ಗಣಿ ಕಂಪನಿಗಳು ಸುಶೀಲಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ, ಕೇವಲ ಧೂಳನ್ನು ಮಾತ್ರ ಉಣಬಡಿಸುತ್ತಿವೆ ಎಂದು ಗ್ರಾಮದ ಮುಖಂಡ ವಕೀಲರಾದ ಡಿ.ಮಲ್ಲಿಕಾರ್ಜುನ ಅರೋಪಿಸಿದರು.
ಅವರು ತಾಲೂಕಿನ ಸುಶೀಲಾನಗರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ  ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಂದಾಲ್ ಸ್ಟೀಲ್ , ಜೆ.ಟಿ.ಸಿ, ವೆಸ್ಕೋ, ಐಲಿ ಗುರುನಾಥ, ಚೌಗ್ಲೆ, ಎಂ.ಎಸ್.ಪಿ,.ಎಲ್ ಹಾಗೂ ಇತರ ಸಣ್ಣ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಇದರಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಸೌಲಭ್ಯಗಳಿಲ್ಲದೆ ಗಣಿ ನಿರಾಶ್ರಿತರಾಗಿದ್ದಾರೆ, ಅದ್ದರಿಂದ ಅವರಿಗೆ ಸೂಕ್ತ ಸೌಲಭ್ಯ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಪ್ರಮುಖವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹಣಕಾಸಿನ ಸೌಲಭ್ಯಗಳಾಗಿ 5 ಲಕ್ಷದ ವರಗೆ ಧನ ಸಹಾಯಮಾಡಬೇಕು, ಪ್ರತಿ ಕುಟುಂಬದ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಿಂಗಳಿಗೆ 2 ಸಾವಿರ ಪಿಂಚಣಿ ನೀಡಬೇಕು, ಸ್ಥಳೀಯವಾಗಿ ಉತ್ತಮ ಶಿಕ್ಷಣ ಪಡೆದು ಉದ್ಯೋಗವಿಲ್ಲದಂತಹ ಯುವಕರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು, ಕೇವಲ ರಾಜಕೀಯ ಲಾಭಕ್ಕಾಗಿ ಕೆಲವೇ ಕೆಲವರಿಗೆ ಗುತ್ತಿಗೆ ನೀಡುವುದು ಎಷ್ಟು ಸರಿ, ನಿಜವಾದ ಸಮಸ್ಯೆ ಅನುಭವಿಸುವವರಿಗೆ ಗುತ್ತಿಗೆ ಕಾಮಗಾರಿಗಳನ್ನು ನೀಡಬೇಕು, ಗ್ರಾಮ ಪಂಚಾಯಿತಿಯ ಅಡಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು, ಅಲ್ಲದೆ ಸ್ಥಳೀಯ ಜನರ ಅನುಕೂಲಕ್ಕಾಗಿ ಉತ್ತಮ ಹಾಗೂ ಎಲ್ಲಾ ಸೌಲಭ್ಯಗಳಿರುವ ಅಧುನಿಕ ಅಸ್ಪತ್ರೆ ಸ್ಥಾಪಿಸಬೇಕು, ಈ ಬಗ್ಗೆ ಅತಿ ಹೆಚ್ಚು ಬಾರಿ ತಹಶೀಲ್ದಾರ್, ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದರೂ ಸಹ ಸಮಸ್ಯೆ ಪರಿಹಾರವಾಗಿಲ್ಲ, ಅದ್ದರಿಂದ ಮುಂದಿನ ದಿನಗಳಲ್ಲಿ ಬಾರಿಕೋಲು ಬೀಸಲಾಗುವುದು ಅದು ಲೇಖನಿಯ ಮೂಲಕ ಕೋರ್ಟಗೆ ಹಾಕಲಾಗುವುದು ಸ್ಥಳೀಯ ನಾಗರೀಕರಿಗೆ ಉಂಟಾಗುವ ಸಮಸ್ಯೆಗಳ ಪಟ್ಟಿಯೊಂದಿಗೆ ಅಪಿಡವೆಟ್ ಸಲ್ಲಿಸುವ ಮೂಲಕ ಹೈಕೋರ್ಟನಲ್ಲಿ ಹೋರಾಟಮಾಡಲಾಗುವುದು, ನಮ್ಮ ಹೋರಾಟ ನಿರಂತರವಾಗಿ ಗ್ರಾಮಗ ಮೂಲಭೂತ ಸೌಲಭ್ಯ ಸಿಗುವವರೆಗೆ ಇರುತ್ತದೆ  ಅದ್ದರಿಂದ ಕಡ್ಡಾಯವಾಗಿ ಕಂಪನಿಗಳ ಮಾಲೀಕರು ಎಚ್ಚೇತ್ತು ಕೊಂಡು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುಶೀಲಾನಗರ ಗ್ರಾಮದ ಹಾಗೂ ಪಂಚಾಯಿತಿಯ ಎಲ್ಲಾ ಮುಖಂಡರುಗಳು, ಮಾಜಿ ಸದಸ್ಯರುಗಳು, ಅಧ್ಯಕ್ಷರುಗಳು, ಸಾರ್ವಜನಿಕರು ಉಪಸ್ಥಿತರಿದ್ದು ತಮಗೆ ಅದಂತಹ ನೋವುಗಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟರು, ಬಡವರು ಶಿಕ್ಷಣ ಪಡೆಯಲು ಯಾವುದೇ ಸೌಲಭ್ಯವಿಲ್ಲ, ಚಿಕಿತ್ಸೆ ಮರೀಚಿಕೆಯಾಗಿದೆ, ಯಾವುದೇ ಸೌಲಭ್ಯವಿಲ್ಲ ಇನ್ನೂ ಉದ್ಯೋಗ ಇಲ್ಲವೇ ಇಲ್ಲವೆಂದು ಅರೋಪಿಸಿದರು. ಅಲ್ಲದೆ ಕೆಲ ಕಂಪನಿಗಳು ಬೋಗಸ್ ಬಿಲ್ಲುಗಳನ್ನು ತೋರಿಸುತ್ತಿದ್ದಾರೆ, ಅಲ್ಲದೆ ಪರಿಹಾರ ನೀಡದೇ ಪರಿಹಾರ ನೀಡಿದ ಬಗ್ಗೆ ದಾಖಲೆಗಳನ್ನು ತೊರಿಸುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು ಹೋರಾಟ ನಿಲ್ಲಿಸುವುದಿಲ್ಲ ಎಂದರು.
ತಾಲೂಕಿನ ಸುಶೀಲಾನಗರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಕೀಲರು ಮುಖಂಡರಾದ ಡಿ. ಮಲ್ಲಿಕಾರ್ಜುನ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿ ಪರಿಹರಿಸಲು ಜಿಂದಾಲ್, ಜೆಟಿಸಿ ಕಂಪನಿಗಳಿಗೆ ಒತ್ತಾಯಿಸಿದರು.