ಬಸಪ್ಪತಾತ ಪುಣ್ಯರಾಧನೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಮತ್ತು ರಥೋತ್ಸವ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.14: ತಾಲ್ಲೂಕಿನ ಅರಳಿಗನೂರು ಗ್ರಾಮದ ಶರಣಾ ಶ್ರೀ ಬಸಪ್ಪ ತಾತ ಅವರ 58ನೇ ಪುಣ್ಯರಾಧನೆ ಪ್ರಯುಕ್ತ ಮಠದ ಗೋಪುರಕ್ಕೆ ಕಳಸ ರೋಹಣ ಕಾರ್ಯಕ್ರಮ ಹಾಗೂ ಮುತೈದಹಿರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಬುದುವಾರ ರಾತ್ರಿ ಬಳಗನೂರು ಶ್ರೀ ಮರಿಶಿವಯೋಗಿಗಳ ಮಹಾಪೂರಣ ಕಾರ್ಯಕ್ರಮಕ್ಕೆ ಮಹಾಮಂಗಳ  ಉಜ್ಜಿನಿ‌ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಚಾರ್ಯ ಭಗವತ್ ಪಾದರು ಆಶೀರ್ವಚನ ನೀಡಿದರು, ಸಂದರ್ಭದಲ್ಲಿ ಹಾಲ್ವಿ ಚರಣ ಸಂಸ್ಥನ ಮಠದ ಅಭಿನವ ಮಹಂತ ಮಹಾ ಸ್ವಾಮಿ ಹಾಗೂ ತೇಕ್ಕಲಕೋಟೆ ಕಂಬಳಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಜಿಗಳು ಇದ್ದರು.
ಇಂದು ಸಂಜೆ ಗ್ರಾಮದಲ್ಲಿ ಬಸಪ್ಪ ತಾತ ರವರ ರಥೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು.