ಮ.ಮ.ಹಳ್ಳಿ : ಶ್ರೀ ಮಠದಲ್ಲಿ ರಕ್ತದಾನ ಶಿಬಿರ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ,ಮಾ.14: ಪಟ್ಟಣಕ್ಕೆ ಸಮೀಪದ ಗರಗ ನಾಗಲಾಪುರದ ಶ್ರೀ ಒಪ್ಪತ್ತೇಶ್ವರ ಸ್ವಾಮಿ ವಿರಕ್ತ ಮಠದ ನಿರಂಜನ ಪ್ರಭು ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ರಕ್ತದಾನ ಶಿಬಿರ ನಡೆಯಿತು.
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ  ಸ್ಥಳಿಯರಾದ ಗಂಡಿಬಸವರಾಜ, ಗುರಿಕಾರ್ ಸತೀಶ್, ಹೆಚ್.ಎಂ.ಚಂದ್ರಶೇಖರ, ಕೊಟ್ರೇಶ್, ಸದ್ಯೋಜಾತ ಶಾಸ್ತ್ರಿ, ಶಂಕ್ರಯ್ಯ,ಅಣ್ಣಿ ಪಂಪಾಪತಿ,ರಾಜಗೋಪಾಲ್ ರೆಡ್ಡಿ, ಬಾರಿಕಾರ ಸೋಮಣ್ಣ, ಗಾದ್ರಿ ಗಿರಿ, ಗ್ರಾಮ ಪಂಚಾಯತಿ ಸದಸ್ಯ ಅಂಜಿನಪ್ಪ, ಕಲ್ಲವನರ ಒಪ್ಪತ್ತೇಪ್ಪ, ಶಿವಮೂರ್ತಿ ಸ್ವಾಮಿ ಸೇರಿದಂತೆ ಇತರರಿದ್ದರು. ನೂರಕ್ಕೂ ಅಧಿಕ ಜನ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ನಿರಂಜನ ಪ್ರಭು ದೇಶಿಕರು, ತಾಲೂಕು ಆರೋಗ್ಯಾಧಿಕಾರಿ  ಭಾಸ್ಕರ್, ಆರೋಗ್ಯ ನಿರೀಕ್ಷಣಾಧಿಕಾರಿ ಅನಿಲ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ
ಶಾರದಾ, ಆಶಾ ಕಾರ್ಯಕರ್ತೆಯರಾದ ದಾಕ್ಷಾಯಿಣಿ, ನಾಗರತ್ನ, ರೇಣುಕಾ, ವಿಮ್ಸ್ ರಕ್ತ ಭಂಡಾರದ ಜಗದೀಶ್ ಹಾಗೂ ಇತರರು ಇದ್ದರು.