ಮಾನವ ಬಂಧುತ್ವ ವೇದಿಕೆ ವತಿಯಂದ ಮಹಿಳಾ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.14: ಮಾನವ ಬಂಧುತ್ವ ವೇದಿಕೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು.
 ಕಾರ್ಯಕ್ರಮಕ್ಕೆ ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮರಾದ ಪೈಲ್ವಾನ್ ರಂಜಾನ್ ಸಾಬ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಂಧುತ್ವ ವೇದಿಕೆ ಸಂಚಾಲಕರು ವಿಜಯಕುಮಾರ್ ಸಂಗನಕಲ್ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಪ್ರತಿ ಗ್ರಾಮ ಹಳ್ಳಿ ಹೋಬಳಿ ತಾಲೂಕು ಮಟ್ಟದ ಸಂಘಟನೆಯಿಂದ ಹಾಗೂ ಬಂಧುತ್ವ ವಿಚಾರ ಸಿದ್ದಾಂತದಿಂದ ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಂದಿರಲು ಸಾಧ್ಯವಾಗುವುದು, ಏಕೆಂದರೆ ವೈಚಾರಿಕ ಚಿಂತನೆಗಳು ಮೌಡ್ಯ ಮತ್ತು ಮೂಢನಂಬಿಕೆ ಮನುಷ್ಯನ ಬದುಕನ್ನು ಭಯದ ವಾತಾವರಣ ಕಾರಣದಿಂದ ಇಂದು ಎಷ್ಟೋ ಕುಟುಂಬಗಳು ಬಡತನಕ್ಕೆ ಮತ್ತು ಅಶಾಂತಿಗೆ ಸಿಲುಕಿ ನರಳುತ್ತಿವೆ ಎಂದು ಹೇಳಿದರು.
ಹಿರಿಯ ಹೋರಾಟಗಾರರು ಚಿಂತಕರು ವಿ ಎಸ್ ಶಿವಶಂಕರ್ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರ ಸಿದ್ಧಾಂತ ಮತ್ತು ವಿಚಾರಗಳು ಈ ಕಾಲಘಟ್ಟದಲ್ಲಿ ತುಂಬಾ ಅವಶ್ಯಕತೆ ಇದೆ. ಅವರ ಮನು ವ್ಯವಸ್ಥೆಯ ವಿರುದ್ಧ ಹೋರಾಟ ಮತ್ತು ಸಂವಿಧಾನ ಉಳಿವಿಗಾಗಿ ಅವರ ದಿಟ್ಟತನ ಎಲ್ಲರಿಗೂ ಆದರ್ಶವಾಗಿದೆ. ಅವರೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸುಧಾರಣೆ ಮತ್ತು ಸಮ ಸಮಾಜದ ಬುದ್ಧ ಬಸವ ಅಂಬೇಡ್ಕರ್ ಪೆರಿಯರ್ ನಾರಾಯಣಗುರು ಮುಂತಾದ ಮಹಾನ್ ನಾಯಕರ ಚಿಂತನೆಗಳ ಮೂಲಕ ಸಾಮಾಜಿಕ ಕ್ರಾಂತಿ ನಾಯಕ ಎಂದರೆ ತಪ್ಪಾಗಲಾರದು. ಅವರು ಮುಖ್ಯವಾಗಿ ಮಹಿಳೆಯರನ್ನು ಧರ್ಮ ಜಾತಿ ದೇವರು ಹೆಸರುಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ಆರ್ಥಿಕ ಹೊರೆ ಮುಂತಾದ ಸಾಮಾಜಿಕ ಪಿಡುಗುಗಳಿಂದ ಮಹಿಳೆಯರನ್ನು ಹೊರ ತರುವ ಚಿಂತನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹಿಳಾ ಬಂಧುತ್ವ ಘಟಕವನ್ನು ಸ್ಥಾಪಿಸಿ ಅದರ ಮುಖೇನ ಹೊಸ ಯುಗಕ್ಕೆ ನಾಂದಿ ಹಾಡಲು ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅದಕ್ಕಾಗಿ ನಾವುಗಳು ಇಂತಹ ಸಂಘಟನೆ ಮತ್ತು ವ್ಯಕ್ತಿಗಳನ್ನು ಬೆಂಬಲಿಸಬೇಕು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶ್ರೀಮತಿ ಪುಷ್ಪ ಚಂದ್ರಶೇಖರ್  ಮಾನವ ಬಂಧುತ್ವ ವೇದಿಕೆ ಎಂದರೆ ಒಂದು ಪಕ್ಷಕ್ಕೆ ಸೀಮಿತ ಅಲ್ಲ ಎಂದರು ಮತ್ತು ಜಾತಿ ಧರ್ಮ ಮೀರಿ ನಿಂತಿರುವ ಸಂಘಟನೆ ಇದು. ಮುಖ್ಯವಾಗಿ ಮಹಿಳೆಯರ ಬದಲಾವಣೆಯೇ ಮುಖ್ಯ ಬದಲಾವಣೆ ಎಂದರು ಅದು ಮನೆ ಇರಬಹುದು ಸಮಾಜ ಇರಬಹುದು ಧಾರ್ಮಿಕ ಕ್ಷೇತ್ರ ಇರಬಹುದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದರೆ ದೇಶವು ಅಭಿವೃದ್ಧಿಯಾಗುವುದು ಎಂದು ಹೇಳಿದರು.
ಮಾಜಿ ಕಾರ್ಪೊರೇಟರ್ ಪರ್ವೀನ್ ಬಾನು ಅವರಿಗೆ ಮತ್ತು ಶ್ರೀಮತಿ ಪುಷ್ಪ ಲತಾ ಚಂದ್ರಶೇಖರ್ ಅವರಿಗೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಿಕಿಯಾದ ಶ್ರೀಮತಿ ಕಲಾವತಿ ಇವರಿಂದ ಸನ್ಮಾನವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಆಯೇಷಾ ರವರು, ವಕೀಲರಾದ ಜೋಗಿನ ಚಂದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯರು ಪಿ ರಂಜಾನ್ ಬಾಷಾ ಮತ್ತು ದಿವಾಕರ್ ಬಾಬು ಹಾಗೂ ಮುಂತಾದ ಮಹಿಳೆಯರು
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.