ಕಳಸಾ-ಬಂಡೂರಿ ಯೋಜನೆ ಕಾರ್ಯಾರಂಭಕ್ಕೆ ಮನವಿ
ನವಲಗುಂದ,ಮಾ.14: ಚುನಾವಣೆಯ ಒಳಗಾಗಿ ಮಹದಾಯಿ ಕಳಸಾ ಬಂಡೂರಿ ಯೋಜನೆ ತ್ವರಿತಗತಿಯಲ್ಲಿ ಕಾರ್ಯರಂಭ ಮಾಡುವಂತೆ ಹಾಗೂ ಬ್ಯಾಂಕ್ ಗಳಲ್ಲಿನ ಕಟಬಾಕಿ ತೆಗೆದುಹಾಕಿ ರೈತರಿಗೆ ಮರಳಿ ಸಾಲ ನೀಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಿದರು.
ಇದೇ ವೇಳೆಯಲ್ಲಿ ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಜೊತೆ ನದಿ ಜೋಡಣೆ ವಿಚಾರವಾಗಿ ಚರ್ಚೆಸಿ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆಯಲ್ಲಿ ಎಸ್. ಬಿ. ಪಾಟೀಲ, ಮಲ್ಲೇಶ್ ಉಪ್ಪಾರ, ಎಲ್ಲಪ್ಪ ದಾಡಿಬಾಯಿ, ಬಸನಗೌಡ ಹುಣಸಿಕಟ್ಟೆ, ಗೋವಿಂದರೆಡ್ಡಿ ಮೊರಬದ, ಮುರಗೆಪ್ಪಾ ಪಲ್ಲೇದ, ರವಿ ತೋಟದ ಇನ್ನು ಅನೇಕ ರೈತರಿದ್ದರು.