ನಾಳೆ ಸಿಂಧನೂರಿಗೆ ರೈಲ್ ಸಂಚಾರ ಮೋದಿ ಚಾಲನೆ-ಡಾ.ಬಾಬುರಾವ
ರಾಯಚೂರು.ಮಾ.೧೪- ದಶಕದ ಕನಸು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಯೋಜನೆಯಡಿ ಸಿಂಧನೂರು ನಗರದವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಮಾ.೧೫ ರಂದು ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಲಹಾ ಸಮತಿ ಸದಸ್ಯ ಮತ್ತು ಸಮಾಜ ಸೇವಕ ಡಾ.ಬಾಬುರಾವ್ ಅವರು ಹೇಳಿದರು.
ರೈಲಿನಲ್ಲಿ ಓಡಾಡಬೇಕು ಎನ್ನುವ ಸಿಂಧನೂರು ಜನತೆಯ ದಶಕಗಳ ಕನಸು ಸಾಕಾರಗೊಳ್ಳಲಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯ ಪ್ರಯಾಣಿಕರ ರೈಲುಗಳನ್ನು ಕಾರಟಗಿಯಿಂದ ಸಿಂಧನೂರುವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮತ್ತು ರಾಯಚೂರು ಲೋಕಸಭಾ ಸಂಸದ ರಾಜ ಅಮರೇಶ ನಾಯಕ ಅವರ ನಿರಂತರ ಶ್ರಮದಿಂದ ದಶಕಗಳ ಸಿಂಧನೂರು ಜನರ ಕನಸು ನನಸಾಗಿದೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು ಜನತೆಗೆ ಮಾತು ಕೊಟ್ಟಿದ್ದರು. ಅದರಂತೆ ರೈಲ್ವೆ ಹಳಿ ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದೆಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಿಂಧನೂರಿನಿಂದ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಪ್ರತಿದಿನ ರೈಲು ಸಂಚಾರ ನಡೆಸಲಿದೆ. ಇಲ್ಲಿನ ಜನತೆ ಸುಗುಮವಾಗಿ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ರೈಲ್ವೆ ಸಂಚಾರಕ್ಕೆ ಮಹತ್ತರ ನಿರ್ಧಾರ ತೆಗೆದುಕೊಂಡ ರೈಲ್ವೆ ಖಾತೆ ಸಚಿವರಿಗೆ ಮತ್ತು ರೈಲ್ ಒಡನಾಟಕ್ಕೆ ಶ್ರಮಿಸಿದ ಸಂಸದ ಸಂಗಣ್ಣ ಕರಡಿ ಹಾಗೂ ಸಂಸದ ರಾಜ ಅಮರೇಶ ನಾಯಕ ಅವರಿಗೆ ಸಿಂಧನೂರು ಜನತೆಯ ಪರ ಬಾಬುರಾವ ಅಭಿನಂದನೆ ಸಲ್ಲಿಸಿದ್ದಾರೆ.