ಆಸ್ತಿ ವಿವಾದ, ಮಾರಣಾಂತಿಕ ಹಲ್ಲೆ೭ ಜನರ ವಿರುದ್ಧ ಪ್ರಕರಣ ದಾಖಲು
ಹಟ್ಟಿ,ಲಿಂಗಸೂಗೂರು.ಮಾ.೧೪- ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೆಂಕಟೇಶ ಎನ್ನುವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಏಳು ಜನರ ವಿರುದ್ಧ ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ನಿಲೋಗಲ್ ಗ್ರಾಮದ ನಿವಾಸಿ ವೆಂಕಟೇಶ್ ತಂದೆ ಯಂಕಪ್ಪ ಎನ್ನುವಾತನಿಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರೂ ಸೇರಿದಂತೆ ಏಳು ಜನರ ವಿರುದ್ಧ ಸಂತ್ರಸ್ಥನ ತಾಯಿ ಅಂಬಮ್ಮ ಉಪ್ಪಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.