ಮೆಣಸಿನಕಾಯಿ ಲಾರಿಗೆ ವಿದ್ಯುತ್ ಸ್ಪರ್ಶಿಸಿ ಅಪಾರ ನಷ್ಟ
ರಾಯಚೂರು.ಮಾ.೧೪- ಮೆಣಸಿನಕಾಯಿ ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಭಸ್ಮವಾದ ಘಟನೆ ದೇವದುರ್ಗದ ಯರಮಸಾಳ ಕ್ರಾಸ್ ಬಳಿ ನಡೆದಿದೆ.
ರಾಯಚೂರಿನ ಮಾರುಕಟ್ಟೆಗೆ ತೆರಳಲು ಲಾರಿಯಲ್ಲಿ ೫೦೦ ಚೀಲಗಳನ್ನು ಸಾಗಿಸುವಾಗ ದುರಂತ ಸಂಭವಿಸಿದೆ. ರಸ್ತೆ ಮಧ್ಯೆ ಹೈವೋಲ್ವೇಜ್ ತಂತಿ ತಗುಲಿದ ಕಾರಣ ಸುಮಾರು ೨೦೦ ಚೀಲ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸಿನ ಕಾಯಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕಾಗಿಮಿಸಿದ ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ.
ಆದರೆ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಮೆಣಸಿನಕಾಯಿ ಕಂಡು ರೈತ ಕಣ್ಣೀರಿಟ್ಟಿದ್ದಾನೆ. ಮೊದಲೇ ಬರಗಾಲ. ಕಷ್ಟಪಟ್ಟು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನು ಇನ್ನೇನು ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಮಧ್ಯೆಯೇ ಬೆಂಕಿಗಾಹುತಿಯಾಗಿದ್ದು, ಮೆಣಸಿನಕಾಯಿ ಸಂಪೂರ್ಣ ನಾಶವಾಗಿದೆ.