ನಾಳೆ ಸಿಂಧನೂರುಗೆ ರೈಲು ಸಂತಸ : ಅರೆ ಬರೆ ಕಾಮಗಾರಿ , ಉದ್ಘಾಟನೆ ಅವಸರವೆನಿತ್ತು -ಕೆ. ವಿರುಪಾಕ್ಷಪ್ಪ.
(ಸಂಜೆವಾಣಿ ವಾರ್ತೆ)
ಸಿಂಧನೂರು,ಮಾ.೧೪-
ನಾಳೆ ಸಿಂದನೂರಿಗೆ ರೈಲು ಆಗಮನ ಸಂತಷದ ವಿಷಯ ಆದರೆ ಪಾರ್ಕಿಂಗ್ ,ಕಂಪೌಂಡ್ ,ಕುಡಿಯುವ ನೀರು ,ವಿದ್ಯುದ್ದಿಕರಣ ಸೇರಿದಂತೆ ಹಲವು ಕಾಮಗಾರಿ ಗಳು ಬಾಕಿ ಇರುವಾಗಲೇ ಅವಸರದಲ್ಲಿ ರೈಲು ಉದ್ಘಾಟನೆ ಮಾಡುವುದೇನಿತ್ತು ಎಂದು ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಪ್ರಶ್ನಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಾನು ಸಂಸದನಾಗಿದ್ದಾಗ ಈ ನಮ್ಮ ಭಾಗಕ್ಕೆ ರೈಲು ಬೇಕೆಂಬ ಒತ್ತಡ ರಾಯಚೂರು ಜಿಲ್ಲಾಧಿಕಾರಿಗಳಿಗೆ ಹಾಕಿದ್ದೆ ಆಗ ಭೂ ಸರ್ವೆ ಅಂದೆ ಪ್ರಾರಂಭವಾಯಿತು ಮತ್ತು ಸಚಿವ ಬಸವರಾಜ ರಾಯರಡ್ಡಿ ಅವರ ಪಾತ್ರನೂ ಪ್ರಮುಖ ವಾಗಿದೆ ಈಗ ಸಂಗಣ್ಣ ಕರಡಿಯವರ ಶ್ರಮನೂ ಇದೇ ಅಂತಹ ಹೇಳಬಹುದು.
ಕಾಮಗಾರಿ ಗಳು ಇನ್ನೂ ಬಾಕಿ ಇರುವಾಗಲೇ ಅವಸರದಲ್ಲಿ ನಾಳೆ ಉದ್ಘಾಟನೆ ಮಾಡುವುದರ ಹಿಂದಿನ ಉದ್ದೇಶವೆನು …? ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಎಲ್ಲಾ ಕಾಮಗಾರಿ ಗಳು ಸುಸಜ್ಜಿತ ವಾದಾಗ ಉದ್ಘಾಟನೆ ಮಾಡಬಹುದಾಗಿತ್ತು ಎಂದರು.ಮೊದಲಿಗೆ ರೈಲು ಸಿಂಧನೂರುಗೆ ಆಗಮಿಸಲು ಕಾರಣಿಕರ್ತರಾದ ಕೇಂದ್ರ ಸರ್ಕಾರದ ಸಚಿವ ಮಂಡಳಿಗೆ ಮೊಟ್ಟಮೊದಲಿಗೆ ಅಭಿನಂದನೆಗಳು ಎಂದರು.
ಸಂಗಣ್ಣಗೆ ಟಿಕೇಟ್ ತಪ್ಪಿದ್ದು : ಬಿಜೆಪಿ ಮಂಡಲ ಅದ್ಯಕ್ಷರು ಗಳ ನೇಮಕ ದಲ್ಲಿ ಸಂಸದ ಸಂಗಣ್ಣ ಸ್ಥಳೀಯ ಅಮರೇಗೌಡ ಮಾತು ಕೇಳಿ ವರಿಷ್ಠರ ಬಳಿ ಹೋಗಿ ಮರು ಆದೇಶ ಮಾಡಿಸಿಕೊಂಡು ಬಂದಿದ್ದು ಎಷ್ಟು ಸರಿ ಇದೆಲ್ಲಾ ಹುಚ್ಚುತನ ಎಂದರು.ಸಂಗಣ್ಣ ಪ್ರತಿ ಬಾರಿ ಲೋಕಸಭಾ ಚುನಾವಣೆಯಲ್ಲಿ ’ ಸಿಂದನೂರು ಮರುಜನ್ಮ ನೀಡಿದೆ ’ಎನ್ನುತ್ತಾನೆ ಆದರೆ ಸಿಂಧನೂರಿನ ಜನತೆಗೆ ತನ್ನ ಕೊಡುಗೆ ಏನು ಎಂಬುವುದು ಹೇಳಲಿಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ ಪ್ರತಿ ಬಾರಿ ಶೇಕಡಾ ಐದರಿಂದ ಹತ್ತರಷ್ಟು ಹೊಸ ಮುಖಗಳಿಗೆ ಮಣೆ ಹಾಕುವುದು ಸಹಜ ಅದು ನಮ್ಮ ಪಕ್ಷದಲ್ಲಿನ ಸಹಜ ಗುಣ .ಅದರಂತೆ ಇವರಿಗೆ ಟಿಕೇಟ್ ತಪ್ಪಿ ಡಾ ಬಸವರಾಜ ಅವರಿಗೆ ಕೊಟ್ಟಿದ್ದಾರೆ ಇದರಲ್ಲಿ ಹೊಸತನ ಏನಿಲ್ಲ ಇದು ಸಹಜ ಪ್ರಕ್ರಿಯೆ ಎಂದರು.ಸಂಗಣ್ಣ ಅವರಿಗೆ ಟಿಕೇಟ್ ಕೊಡಬೇಡಿ ಎಂದು ಹಲವರು ವರಿಷ್ಠರ ಮುಂದೆ ಹೇಳಿದ್ದಾರೆ ಅದರಲ್ಲಿ ನಾನು ಪ್ರಮುಖ ವ್ಯಕ್ತಿ ಎಂದರು.ಪ್ರಧಾನಿ ಮೋದಿಯವರು ತಮ್ಮ ಆಡಳಿದ ಅವಧಿಯಲ್ಲಿ ಆದ ಕಾಮಗಾರಿ ಗಳನ್ನು ಪೂರ್ಣಗೊಳಿಸುವುದೆ ಪ್ರಸ್ತುತ ಹೊಸ ಕಾಮಗಾರಿ ಗಳು ಬೇಡ ಎಂಬ ಅಜೆಂಡ ಇಟ್ಟುಕೊಂಡಿದ್ದರು ಅದರಂತೆ ಈ ಬಾರಿ ರೈಲು ನಿಲ್ದಾಣ ,ವಿಮಾನ ನಿಲ್ದಾಣ ಸೇರಿದಂತೆ ಹಲವು ದೊಡ್ಡ ದೊಡ್ಡ ಅಭಿವೃದ್ಧಿ ಕೆಲಸಗಳನ್ನು ಪೂರ್ಣ ಗೊಳಿಸಿ ಜನರ ಸೇವೆಗೆ ಸಿಗುವಂತೆ ಮಾಡಿದ್ದಾರೆಂದರು.
ಸ್ಥಳಕ್ಕೆ ಭೇಟಿ : ಮಾಜಿ ಸಂಸದರು ರೈಲು ನಿಲ್ದಾಣಕ್ಕೆ ಬೇಟಿ ನೀಡಿದಾಗ ಕಾಮಗಾರಿ ಮಾಡಿದ ಜೆಇ ಗಳಿಗೆ ಪೆಮೆಂಟ್ ಆಗಿಲ್ಲ ಎಂದು ಸ್ಥಳದಲ್ಲಿ ಧರಣಿ ಕುಳಿತು ತಮ್ಮ ಅಳಲನ್ನು ತೋಡಿಕೊಂಡರು.