ಮೂಲಭೂತ ಸೌಲಭ್ಯಗಳ ಪರಿಶೀಲನೆ
ರೋಣ, ಮಾ14: ರೋಣ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಸೆಕ್ಟರ್ ಅಧಿಕಾರಿ ರಿಯಾಜ್ ಕೆ ಖತೀಬ ಅವರು ಭೇಟಿ ನೀಡಿ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.
ರೋಣ ತಾಲೂಕಿನ ಮುಗುಳಿ, ಬೆಳಗೋಡ ಹೊನ್ನಿಗನೂರು, ಯರೇಕುರುಬನಹಾಳ ಇತರೆ ಗ್ರಾಮಗಳಲ್ಲಿ ಮತಗಟ್ಟೆ ಸಂಖ್ಯೆ:42, 43, 09, 18, 20 ,11, 12, 34, ಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು ಲೋಕಸಭಾ ಚುನಾವಣೆ ಸಮಿಪಿಸುತಿದ್ದು ಬಿ.ಎಲ್.ಒ ಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಮತದಾನ ಮಾಡಲು ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.
ಮತಗಟ್ಟೆಯಲ್ಲಿರುವ ಸೌಲಭ್ಯಗಳಾದ ನೆರಳು, ಕುಡಿಯುವ ನೀರಿನ ವ್ಯವಸ್ಥೆ , ಕುರ್ಚಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ವಿದ್ಯತ್ ವ್ಯವಸ್ಥೆ ಮಾಡಿದ್ದರ ಬಗ್ಗೆ ಪರಿಶಿಲಿಸಿದರು. ಎಲ್ಲಾ ಮತಗಟ್ಟೆಗಳಿಗೆ ಎಲ್ಲ ಮತದಾರರು ವೋಟರ್ ಹೆಲ್ಪ್ ಲೈನ್ ಆ?ಯಪ್ ಹಾಕಿಕೊಳ್ಳುವಂತೆ ಮತದಾರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎಲ್ಲಾ ಬಿ.ಎಲ್.ಒ.ಗಳು ಉಪಸ್ಥಿತರಿದ್ದರು.