ಮುಂಗಡ ತೆರಿಗೆ ಮತ್ತು ಐ.ಟಿ.ಆರ್.-ಯು  ಫೈಲಿಂಗ್‌ಗೆ ಮೌಲ್ಯಯುತವಾದ ಜಾಗೃತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.14 ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಮುಂಗಡ ತೆರಿಗೆ ಮತ್ತು .ಟಿ.ಆರ್.-ಯು ಫೈಲಿಂಗ್‌ಗೆ ಮೌಲ್ಯಯುತವಾದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷರಾದ ಬಿ.ಮಹಾರುದ್ರಗೌಡ ಬಂದಂತಹ ಮುಖ್ಯ ಅತಿಥಿಗಳನ್ನು ಸ್ವಾಗತಸಿದರು,
ಸಂಸ್ಥೆಯ ಹಿರಿಯ ಉಪಾದ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ರವರು ಪಾಸ್ತಾವಿಕವಾಗಿ ಮಾತನಾಡುತ್ತಾ, ಐಟಿಆರ್ ಫೈಲಿಂಗ್ ಎನ್ನುವುದು ತೆರಿಗೆದಾರನು ತನ್ನ ಆರ್ಥಿಕ ವರ್ಷದಲ್ಲಿ ಗಳಿಸಿದ ಒಟ್ಟು ಆದಾಯದ ವರದಿಯನ್ನು ಸಲ್ಲಿಸುವ ಪ್ರಕ್ರಿಯೆಯಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ, ಒಬ್ಬ ವ್ಯಕ್ತಿಯು ತಮ್ಮ ರಿಟರ್ನ್ಸ್ ಫೈಲಿಂಗ್ ಅನ್ನು ಪೂರ್ಣಗೊಳಿಸಬಹುದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲು ಅಧಿಕಾರಿಗಳು ಬಂದಿದ್ದಾರೆ ಎಂದು ಸಭೆಗೆ ತಿಳಿಸಿದರು.
ಆದಾಯ ತೆರಿಗೆ ಅಧಿಕಾರಿ ಮಲ್ಲಿಕಾರ್ಜುನ ಗೌಡ, ಮಾತನಾಡುತ್ತಾ, ಐಟಿಆರ್ ನಿವ್ವಳ ತೆರಿಗೆ ಹೊಣೆಗಾರಿಕೆಯನ್ನು ಘೋಷಿಸಲು, ತೆರಿಗೆ ವಿನಾಯಿತಿಗಳ ಕ್ಲೈಮ್ ಮಾಡಲು ಮತ್ತು ಒಟ್ಟು ತೆರಿಗೆಯ ಆದಾಯವನ್ನು ವರದಿ ಮಾಡಲು ಬಳಸಲಾಗುವ ಒಂದು ರೂಪವಾಗಿದೆ. ನಿರ್ದಿಷ್ಟ ಪ್ರಮಾಣದ ಹಣವನ್ನು ಗಳಿಸುವ ವ್ಯಕ್ತಿಗಳು ಐಟಿ ರಿಟರ್ನ್ಸ್ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಮುಂಗಡ ತೆರಿಗೆಯನ್ನು ಯಾರು ಪಾವತಿಸಬೇಕು? ಸಂಬಳ ಪಡೆಯುವ ವ್ಯಕ್ತಿಗಳು, ಸ್ವತಂತ್ರೋದ್ಯೋಗಿಗಳು ಮತ್ತು ವ್ಯವಹಾರಗಳು- ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಒಟ್ಟು ತೆರಿಗೆ ಹೊಣೆಗಾರಿಕೆ ರೂ 10,000 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ನೀವು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮುಂಗಡ ತೆರಿಗೆಯು ಎಲ್ಲಾ ತೆರಿಗೆದಾರರು, ಸಂಬಳ ಪಡೆಯುವ ವ್ಯಕ್ತಿಗಳು, ಸ್ವತಂತ್ರೋದ್ಯೋಗಿಗಳು ತೆರಿಗೆಯನ್ನು ಪಾವತಿಸಬೇಕಾಗುತ್ತದೆ
ಹಿರಿಯ ನಾಗರಿಕರು ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವನ್ನು ಹೊಂದಿರದ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ಇದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಸಿಎ ರಾಜಶೇಖರ ರವರು ನಿರೂಪಿಸಿದರು. ಸಂಸ್ಥೆಯ ಗೌರವಕಾರ್ಯದರ್ಶಿಗಳಾದ ಕೆ.ಸಿ ಸುರೇಶಬಾಬು ವಂದನಾರ್ಪಣೆ ಮಾಡಿದರು.
ಸಂದರ್ಭದಲ್ಲಿ, ಉಪಾದ್ಯಕ್ಷರಗಳಾದ ಎಸ್.ದೊಡ್ಡನಗೌಡ, ಸೊಂತಗಿರಿಧರ, ಜಂಟಿಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ನಾಗಳ್ಳಿ ರಮೇಶ, ಜಂಟಿ ಖಜಾಂಚಿ, ಸಿ.ಎಸ್.ಸತ್ಯನಾರಾಯಣ, ಸ್ವಾಗತ ಸಮಿತಿ ಚೇರ್ಮನ್, ಟಿ.ಶ್ರೀನಿವಾಸ ರಾವ್, ಪತ್ರಿಕಾ ಮತ್ತು ಮಾಧ್ಯಮ, ಚೇರ್ಮನ್, ಎಲ್ಲಾ ಪದಾಧಿಕಾರಿಗಳು, ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ-ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.