ರಬಣ್ಣಕಲ್ ಕೆರೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೧೪- ಬೇಸಿಗೆಯ ೩ ತಿಂಗಳ ಕಾಲ ಜನರಿಗೆ ಕುಡಿಯುವ ನೀರಿನ ಕೋರತೆಯಾಗದಂತೆ ತುಂಗಭದ್ರ ಜಲಾಶಯದಿಂದ ಕಾಲೂವೆ ಮೂಲಕ ನೀರನ್ನು ಕುಡಿಯುವ ನೀರಿನ ಕೆರೆ ತುಂಬಿಸಲು ಬಿಡಲಾಗಿದ್ದು ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಹಾಗೂ ಸಿಬ್ಬಂದಿಗಳು ಕೆರೆಯನ್ನು ತುಂಬಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಹಂಪಯ್ಯ ನಾಯಕ ಸೂಚಿಸಿದರು.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ರಬಣ್ಣಕಲ್ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ಮಾನ್ವಿ ಪಟ್ಟಣದಲ್ಲಿನ ೨೭ ವಾರ್ಡ್ಗಳಲ್ಲಿನ ೫೦ ಸಾವಿರ ಜನಸಂಖ್ಯೆಗೆ ಬೇಸಿಗೆಯ ೩ ತಿಂಗಳ ಕಾಲ ಶುದ್ದ ಕುಡಿಯುವ ನೀರನ್ನು ಪೂರೈಸಬೇಕಾಗಿದೆ ಹಾಗೂ ತುಂಗಭದ್ರನದಿ ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ಕುಡಿಯುವ ನೀರು ಪೂರೈಕೆಗೆ ರಬಣ್ಣಕಲ್ ಕೆರೆ ಪ್ರಮುಖ ಅಸರೆಯಾಗಿದ್ದು ೮೦ ಎಕರೆ ವಿಸ್ತಿರ್ಣವಿರುವ ೬ ಮೀಟರ್ ಎತ್ತರ ವಿರುವ ಕೆರೆಯನ್ನು ತುಂಬಿಸಲು ೨.೫ ಮೀಟರ್ ನೀರನ್ನು ತುಂಬಿಸುವುದು ಅಗತ್ಯವಿದೆ ಎಂದು ತಿಳಿಸಿದರು.