ಖಬರಸ್ತಾನ ಫಿರ್ದೋಸ್ ಮಜ್ಜಿದ್ ಆವರಣ ಕಟ್ಟಡ ನಿರ್ಮಿಸದಂತೆ ಒತ್ತಾಯ
ಸಿರವಾರ.ಮಾ.೧೪- ನಿಯಮ ಬಾಹಿರವಾಗಿ ಫಿರ್ದೋಸ್ ಮಸ್ಜೀದ್ ಗೆ ಕಟ್ಟುತ್ತಿರುವ ಕಟ್ಟಡವನ್ನು ಕೂಡಲೆ ನಿಲ್ಲಿಸಬೇಕು ಎಂದು ಮುಸ್ಲೀಂ ಸಮಾಜ ಮುಖಂಡರು ಒತ್ತಾಯಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಮುಸ್ಲಿಂರ ಖಬರಸ್ತಾನ ಫಿರ್ದೋಸ್ ಮಜ್ಜಿದ್ ಜಿಲ್ಲಾ ವಕ್ಸ್ ಅಧಿಕಾರಿ ಈ ಮಸೀದಿಗೆ ಕೆರ್ ಟೇಕರ್ ಆಗಿದ್ದು ಅವರ ಗಮನಕ್ಕೆ ಇದ್ದರು ಕೂಡ ಯಾವುದೇ ಪ್ರಯೋಜನೆ ಆಗಿರುವುದಿಲ್ಲ,
ಫಿರ್ದೋಸ್ ಮಜ್ಜಿದ್ ಜಿಲ್ಲಾ ವಕ್ಸ್ ಅಧಿಕಾರಿ ಆಡಳಿತಧಿಕಾರಿಗಳು ಆಗಿದ್ದು ಮಸೀದಿಯ ಪಕ್ಕದಲ್ಲಿ ರೂಮ್ ಕಟ್ಟಿಲಾಗುತ್ತಿದೆ, ಈಗ ಬೇಸಮೆಂಟ್ ಆಗಿರುತ್ತದೆ, ಈ ಕುರಿತು ಫಿರ್ದೋಸ್ ಮಜ್ಜಿದ್ ಜಿಲ್ಲಾ ವಕ್ಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಕೂಡ ಯಾವುದೇ ಪ್ರಯೋಜನೆ ಇಲ್ಲ ಈ ಕೊಠಡಿಯನ್ನು ಯಾರೂ ಕಟ್ಟಿದ್ದಾರೆ ಎನ್ನುವ ಮಾಹಿತಿಯೂ ಇಲ್ಲವಾಗಿದೆ, ಅವರಿಗೆ ಕೊಠಡಿ ಕಟ್ಟಲು ಯಾರು ಅನುಮತಿ ನೀಡಿದ್ದಾರೆ ಇಲ್ಲ ಜಿಲ್ಲಾ ವಕ್ಸ್ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ನೋಡಿಯು ನೋಡದಂತೆ ಸುಮ್ಮನೆ ಕುಳಿತಿದ್ದಾರೆಯೇ ಎನ್ನುವುದು ಖಚಿತ ಮಡಿಸಬೇಕು,
ಒಂದು ವೇಳೆ ಕೊಠಡಿಯನ್ನು ಕಟ್ಟಿದರೆ ಮಸೀದಿಯ ಮೂರು ದೊಡ್ಡ ಕೀಟಕಿಗಳು ಮೂರು ವೆಂಟಲೇಟರ್ ಮುಚ್ಚಿ ಹೋಗುತ್ತದೆ. ಇದರಿಂದ ಬೆಳಕು ಗಾಳಿ ಬರುವುದಿಲ್ಲ. ಈಗಾಗಲೇ ಬೇಸಿಗೆ ಇದೆ ಇದರ ನಡುವೆ ರಂಜಾನ್ ಮಾಸ ಪ್ರಾರಂಬವಾದ ಹಿನ್ನಲೆಯಲ್ಲಿ ನಮಗೆ ಬೆಳಕು ಹಾಗೂ ಗಾಳಿ ಅತಿ ಮುಖ್ಯವಾಗಿರುತ್ತದೆ ಹೀಗಾಗಿ ಈ ಕೊಠಡಿ ನಿರ್ಮಾಣ ಮಾಡುವುದರಿಂದ ಮಸ್ಜೀದ್ ನ ಒಳಗಡೆ ಗಾಳಿ ಬೆಳಕು ಇಲ್ಲದಂತೆ ಸ್ವಲ್ಪ ವಿಶ್ರಾಂತಿ ಪಡೆಯಲಾಗದೆ ಬಹಳ ತೊಂದರೆಯಾಗುತ್ತದೆ ಆದ ಕಾರಣ ಜಿಲ್ಲಾ ವಕ್ಸ್ ಅಧಿಕಾರಿಗಳು ಈ ಕೂಡಲೇ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಕೊಠಡಿಯ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ನಮ್ಮ ಕೊಠಡಿಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸದೇ ಹೋದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಧರಣಿ ಹಮ್ಮಿಕೊಳ್ಳಬೇಕಾದಿತು ಎಂದು ಎಚ್ಚರಿಕೆಯೊಂದಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹುಸೇನ್ ಬಾಷ ನವಲಕಲ್, ಚಾಂದ್ ಪಾಷ, ನದೀಂ ಸಾಬ್, ಖಾಸಿಂ ಸಾಬ್, ಹುಸೇನ್ ಬಾಷ, ಖಾಜಾ ಸಾಬ್, ಖಾಸಿಂ ಅಲಿ ಸೇರಿದಂತೆ ಇನ್ನೀತರರು