ಗದಗ ಮೃಗಾಲಯದಲ್ಲಿ ನೈಟ್ ಸಫಾರಿ ಆರಂಭವಾಗಲಿ
ಗದಗ,ಮಾ.14: ಗದಗ ಮೃಗಾಲಯದಲ್ಲಿ ನೈಟ್ ಸಫಾರಿ ಆರಂಭ ಮಾಡುವ ಮೂಲಕ ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್ ಕೆ ಪಾಟೀಲ ಹೇಳಿದರು.
ನಗರದ ಮೃಗಾಲಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿರುವ ಗುಳ್ಳೆನರಿ, ಬಂಗಾಳಿ ನರಿ ಹಾಗೂ ಕೆನ್ನಾಯಿ ಪ್ರಾಣಿ ಮನೆ ಹಾಗೂ ಆವರಣ ಮತ್ತು ಮಾಗಡಿ ಕೆರೆ ರಾಮ್ಸಾರ್ ಸೈಟ್ ಕೈಪಿಡಿಯನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಬಿಡುಗಡೆಗೊಳಿಸಿ ಮಾತನಾಡಿದ ಅವರು ಈಗಾಗಲೇ ಮೃಗಾಲಯದಲ್ಲಿ ಪ್ರತಿಶತ 70 ರಷ್ಟು ಪ್ರಾಣಿಗಳಿದ್ದು ಇನ್ನುಳಿದ ಪ್ರಾಣಿಗಳನ್ನು ಆದಷ್ಟೂ ಬೇಗನೆ ತರಲಾಗುವುದು ಎಂದು ಹೇಳಿದರು.
ಮಾಗಡಿ ಕೆರೆಗೆ ಯುನೆಸ್ಕೋ ಗುರುತಿಸುವ ರಾಮ್ಸಾರ್ ಸೈಟ್‍ಗೆ ಸೇರ್ಪಡೆಯಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ,ಡಾ. ಎಚ್.ಎನ್.ನಾಗನೂರ, ರವಿ ಮೂಲಿಮನಿ, ಪ್ರಭು ಬುರಬುರೆ, ಎಸ್.ಎನ್. ಬಳ್ಳಾರಿ, ಎಂ.ಆರ್,ಪಾಟೀಲ, ಶಶಿಕಲಾ ಹೊಸಮನಿ ಸೇರಿದಂತೆ ಮತ್ತಿತರರು ಹಾಜರಿದ್ದರು.