ಮೂರನೇ ಬಾರಿಗೆ ಮೋದಿ ಪ್ರಧಾನಿ
ಚನ್ನಪಟ್ಟಣ.ಮಾ೧೪:ದೇಶದ ಭದ್ರತೆ ಹಾಗೂ ಭವಿಷ್ಯಕ್ಕಾಗಿ, ಮೂರನೇ ಭಾರಿ ಪ್ರಧಾನಿಯಾಗಿ ನರೇಂದ್ರಮೋದಿರವರನ್ನು ಆಯ್ಕೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಸಿಸಿರಾ ರೆಸಾರ್ಟ್‌ನಲ್ಲಿ ಆಯೋಜನೆ ಮಾಡಲಾಗಿದ್ದ, ಭಾರತೀಯ ಜನತಾಪಾರ್ಟಿ ಚನ್ನಪಟ್ಟಣ ವಿಧಾನಸಭಾ ವ್ಯಾಪ್ತಿಯ ತಾಲ್ಲೂಕು ಅಧ್ಯಕ್ಷರು, ವಿವಿಧ ಮೋರ್ಚಾ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಗೂ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಮಟ್ಟದಲ್ಲಿಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅನಿವಾರ್ಯವಾಗಿರುವುದರಿಂದ, ನಮ್ಮ ವಿರೋಧಿಯಾದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಭವ್ಯ ಭಾರತವನ್ನು ದುಷ್ಟರಕೈಯಿಂದ ರಕ್ಷಣೆ ಮಾಡಬೇಕಾದ ಮಹತ್ತರ ಜವಾಬ್ದಾರಿಯಾಗಿದೆಎಂದು ತಿಳಿಸಿದರು.
ಇಂದಿನ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ವಿರೋಧ ಪಕ್ಷದಲ್ಲಿದ್ದಾಗ ಸಂದರ್ಭದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಹಾರಾಡಿದ, ಎಗರಾಡಿದ, ಕಿರುಚಾಡಿದ ಈಗ ತಮ್ಮದೇ ಸರ್ಕಾರವೇ ಇರುವ ಸಂದರ್ಭದಲ್ಲಿ, ಮೇಕೆದಾಟು ವಿಚಾರವನ್ನು ಏಕೆ ಬಾಯಿ ಬಿಡುತ್ತಿಲ್ಲಎಂದು ಡಿಕೆಶಿಯ ಮೇಲೆ ಟೀಕಾ ಪ್ರಹಾರ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿಯೇ ಒಳಜಗಳ ಪ್ರಾರಂಭವಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕಿಂಚಿತ್ತು ಬೆಲೆ ಕೊಡದರೀತಿಯಲ್ಲಿ ನಡೆದುಕೊಳ್ಳುತ್ತಿರುವುದೇ ಕಾರಣವಾಗಿದೆ, ಕೆಲವೇ ದಿನಗಳಲ್ಲಿ ಎದುರಾಗಲಿರುವ ಲೋಕಸಭಾಚುನಾವಣೆಯ ನಂತರಕಾಂಗ್ರೆಸ್ ಸರ್ಕಾರ ಪತನವಾಗುವುದರಲ್ಲಿ ಭವಿಷ್ಯವೇ ಇಲ್ಲಾ ಎಂದರು.
ಎಲ್ಲರೂ ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರದಲ್ಲಿ ಬಿಜೇಪಿ ಅಭ್ಯರ್ಥಿ ಎಂದು ತಿಳಿದುಕೊಂಡಿದ್ದಾರೆ, ನಾನು ಯಾವುದೇ ಕಾರಣಕ್ಕೂ ಅಭ್ಯರ್ಥಿಯಾಗುವುದಿಲ್ಲ, ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್‌ರವರು ಕಣಕ್ಕಿಳಿಯಲಿದ್ದಾರೆ, ನಾನು ರಾಜ್ಯರಾಜಕಾರಣದಲ್ಲೇಇರುತ್ತೇನೆ, ಕ್ಷೇತ್ರವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಚನ್ನಪಟ್ಟಣದಲ್ಲಿಯೇ ನನ್ನ ರಾಜಕಾರಣಎಂದು ತಳಿಸಿದರು.
ಪಕ್ಷದ ಪದಾಧಿಕಾರಿಗಳ ಪದಗ್ರಹಣ ಎಂದು ತಿಳಿದುಕೊಂಡಿದ್ದೆ ಆದರೆಇಲ್ಲಿದೊಡ್ಡಮಟ್ಟದ ಸಮಾವೇಶದರೀತಿಯಲ್ಲಿಯೇಜಿಲ್ಲಾಅಧ್ಯಕ್ಷರು,ತಾಲ್ಲೂಕುಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಆಯೋಜನೆ ಮಾಡಿರುವುದು,ಜಿಲ್ಲೆಗೆಚನ್ನಪಟ್ಟಣಕ್ಷೇತ್ರದಲ್ಲಿ ಪಕ್ಷ ಮುಂದಿದೆಎಂದು, ಒಂದು ಸಂದೇಶವನ್ನು ನೀಡಲಿದೆಎಂದರು.
ವಿಧಾನ ಪರಿಷತ್ತು ಸದಸ್ಯರಾದ ಕೇಶವ ಪ್ರಸಾದ್‌ಜಿ ಮತ್ತು ಆ.ದೇವೇಗೌಡ, ಮಾತನಾಡಿದೇಶದ ಪ್ರಬುದ್ದ ಪ್ರಧಾನಿ ನರೇಂದ್ರಮೋದಿರವರು ಮೂರನೇ ಭಾರಿಗೆ ಪ್ರಧಾನಿಯಾವುದರಲ್ಲಿ ಸಂಶಯವೇಇಲ್ಲಎಂದು ತಿಳಿಸಿ, ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ವಿಮರ್ಶಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷತೂಬಿನಕೆರೆರಾಜು,ಮಜಿ ಸಚಿವ ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಸಿ.ಪಿ.ಯೋಗೇಶ್ವರ್ ರವರ ಮಾರ್ಗದರ್ಶನದಲ್ಲಿ, ಜಿಲ್ಲಾಧ್ಯಕ್ಷರಾದ ಎಂ.ಎನ್.ಆನಂದಸ್ವಾಮಿ, ನಗರಘಟಕದ ಅಧ್ಯಕ್ಷರಾದ ಶಿವು ಹಾಗೂ ಹಲವಾರು ಪದಾಧಿಕಾರಿಗಳು ಕಾರ್ಯಕರ್ತರ ಶ್ರಮದಲ್ಲಿ ಈ ಸಮಾವೇಶವನ್ನು ಮಾಡಲುಕಾರಣವಾಯಿತುಎಂದು ತಿಳಿಸಿದ ಅವರು, ಸಮಾವೇಶಕ್ಕೆ ಬಂದಿದ್ದಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ವೇದಿಕೆಯ ಮೇಲೆ ರಾಮನಗರಜಿಲ್ಲಾ ಬಿಜೆಪಿ ಅಧ್ಯಕ್ಷಎಂ.ಎನ್ .ಆನಂದಸ್ವಾಮಿ, ನಗರ ಬಿಜೆಪಿ ಘಟಕದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಯರಾಮು, ಆರ್.ಎಸ್.ಎಸ್.ಹಿರಿಯ ಮುಖಂಡ ರವೀಶ್‌ಎಲೇಕೇರಿ, ರಾಜ್ಯ ಬಿಜೆಪಿ ರಾಜಕಾರಿಣಿ ಸದಸ್ಯ ರಾಮಚಂದ್ರು, ಮಾಜಿ ಜಿಲ್ಲಾಧ್ಯಕ್ಷ ದೇವರಾಜು, ಮುಖಂಡರುಗಳಾದ ಪ್ರಸಾದ್‌ಗೌಡ, ಗೌತಮ್‌ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾಜೇಶ್ ಹಾಗೂ ಹಲವಾರು ಮಂದಿ ಮುಖಂಡರು ಹಾಜರಿದ್ದರು.