ಮನಗೂಳಿ ಪಟ್ಟಣ ಅಭಿವೃದ್ದಿ ಪಥದತ್ತ ಸಾಗುತ್ತಿದೆ: ಸಚಿವ ಶಿವಾನಂದ ಪಾಟೀಲ
ಬಸವನಬಾಗೇವಾಡಿ:ಸೆ.17: ಮತಕ್ಷೇತ್ರದ ಮನಗೂಳಿ ಪಟ್ಟಣ ಸರ್ವಾಂಗೀಣ ಅಭಿವೃದ್ದಿ ಹೊಂದುವ ಮೂಲಕ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಭಾನುವಾರ ಸಂಜೆ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಾಹನ ಮತ್ತು ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯಿಂದ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಕಾಮಗಾರಿ, ನವೀಕರಿಸಲಾದ ಪಂಚಾಯಿತಿಯ ಸಭಾಭವನವನ್ನ ಉದ್ಘಾಟಿಸಿ ಮಾತನಾಡಿದ ಅವರು ಮನಗೂಳಿ ಪಟ್ಟಣದಲ್ಲಿ ಸರ್ಕಾರಿ ಡಿಗ್ರಿ ಕಾಲೇಜು, ವಿದ್ಯಾರ್ಥಿ ನಿಲಯ ಸೇರಿದಂತೆ ಸಾಕಷ್ಟು ಸರ್ಕಾರಿ ಕಟ್ಟಡಗಳು ತಲೆ ಎತ್ತಿದ್ದು ಹಿಂದೆಂದು ಕಾಣದ ರೀತಿಯಲ್ಲಿ ಪಟ್ಟಣ ಅಭಿವೃದ್ದಿ ಹೊಂದುತ್ತಿದೆ ಕ್ಷೇತ್ರದ ಜನರ ಸಹಾಯ ಸಹಕಾರದಿಂದ ಬಸವನಬಾಗೇವಾಡಿ ಮತಕ್ಷೇತ್ರ ಸರ್ವಾಂಗೀಣ ಅಭಿವೃದ್ದಿ ಹೊಂದುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದರು.
ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶಬ್ಬೀರ ರೇವುಡಕರ ಮಾತನಾಡಿ ಮನಗೂಳಿ ಪಟ್ಟಣದಲ್ಲಿ ಉಕ್ಕಲಿ ಕ್ರಾಸ್, ಡಾ,ಬಿ, ಆರ್ ಅಂಬೇಡ್ಕರ ವೃತ್ತ, ಅಬ್ದುಲ್ ಕಲಾಂ ವೃತ್ತ, ಸೊಮೇಶ್ವರ ಭಜನಾ ಮಂಟಪದ ಹತ್ತಿರಮ ಹೊಸ ಬಸ್‍ಸ್ಟ್ಯಾಂಡ್, ಟಿಪ್ಪು ಸುಲ್ತಾನ ವೃತ್ತ, ಪೊಲೀಸ ಸ್ಟೇಶನ್, ರಾಣಿ ಚನ್ನಮ್ಮಾ ವೃತ್ತ, ಶಿವಾಜಿ ವೃತ್ತ, ಅಗಸಿ ಹತ್ತಿರ ಸೇರಿದಂತೆ ಒಟ್ಟು 11 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ, ಅಲ್ಲದೇ ಕ್ಯಾಮರಾದೊಂದಿಗೆ ಸೌಂಡ್ ವ್ಯವಸ್ಥೆ ಕಲ್ಪಿಸಲಾಗಿದೆ ಇದರ ಮೂಲಕ ನೇರವಾಗಿ ಪಂಚಾಯಿತಿಯಂದಲೇ ಮಾಹಿತಿಯನ್ನ ರವಾನಿಸಬಹುದಾಗಿದೆ, ಅಲ್ಲದೇ ಪಟ್ಟಣ ಪಂಚಾಯಿತಿಯಲ್ಲಿನ ಸಭಾಭವನವನ್ನ ನವೀಕರಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಕಾಂಗ್ರೆಸ್ ಉಪಾಧ್ಯಕ್ಷ ಶಿವನಗೌಡ ಗುಜಗೊಂಡ, ತಾಲೂಕಾ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಭಾಗ್ಯರಾಜ ಸೊನ್ನದ, ಅಜೀತ್ ಜಾನಕರ, ಸೇರಿದಂತೆ ಮುಂತಾದವರು ಇದ್ದರು.