ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆ
ಚಿತ್ತಾಪುರ:ಸೆ.17: ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪ್ರೀತಿ, ಸೌಹಾರ್ದತೆ ಹಾಗೂ ಶಾಂತಿಯನ್ನು ಸಾರುವ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಶೀಖಾನೆ ರಸೂಲ್ ಕಮಿಟಿ ವತಿಯಿಂದ ಮುಸ್ಲಿಂ ಬಾಂಧವರು ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸುವ ಮೂಲಕ ಆಚರಿಸಿದರು.
ಇದೇ ವೆಳೆ ಪಟ್ಟಣದ ಚಿತ್ತಾಷಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತದೆ. ಮಹಮ್ಮದ್ ಪೈಗಂಬರ್ ಏಕತೆ ಸಹಿಷ್ಣತೆ ಹಾಗೂ ಸಹೋದರತೆಗೆ ಒತ್ತುಕೊಟ್ಟರು. ಇಡೀ ಜಗತ್ತಿಗೆ ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಸಾರಿದವರು ಎಂದರು.
ನಂತರ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಕಪಡಾ ಬಜಾರ್, ಜನತಾ ಚೌಕ್, ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜೀಂಗ್ ಕ್ರಾಸ್, ತಹಶೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು.
ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಜಹೀರ್ ಜುನೈದಿ, ಹಾಜಿಮಲಂಗ್ ಬಾಬಾ, ಮಹ್ಮದ್ ಎಕ್ಬಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ವಸೀಂ, ಇಬ್ರಾಹಿಂ ಎ. ಟ.ಝಡ್ ಹುಸೇನ್, ಇಮಾಮ್ ಅಲಿ, ನಜೀರ ಅಥಾರಿ, ಬಾಬಾ ಸೇರಿದಂತೆ ನೂರಾರು ಯುವಕರು, ಮುಸ್ಲಿಂ ಬಾಂಧವರು ಇದ್ದರು.
ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‍ಐ ಶ್ರೀಶೈಲ್ ಅಂಬಾಟಿ ಸೂಕ್ತ್ ಪೆÇಲೀಸ್ ಬಂದೋಬಸ್ತ್ ಒದಗಿಸಿದರು.