ರಾಷ್ಟ್ರಿಯ ಪೋಷಣ ಅಭಿಯಾನ ಮಾಸಾಚರಣೆ
ಬೀದರ: ಸೆ.17:ತಾಲ್ಲೂಕಿನ ಬಗದಲ್ 2 ನೇ ವಲಯದ ಚಟ್ನಳ್ಳಿ ಗ್ರಾಮ ಪಂಚಾಯತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ರಾಷ್ಟ್ರಿಯ ಪೆÇೀಷಣ ಅಭಿಯಾನ ಮಾಸಾಚರಣೆ ಕಾಯಕ್ರಮದಲ್ಲಿ ಶ್ರೀಮತಿ ಸುರೇಖಾಬಾಯಿ ಮೇಲ್ವಿಚಾರಕಿ ಅವರು ಮಾತನಾಡಿ ಪೆÇೀಷಣ ಅಭಿಯಾನವು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಗಭಿಣಿಯರು ಬಾಣಂತಿಯರು ಪೌಷ್ಟಿಕಾಂಶವುಳ್ಳ ಆಹಾರಗಳು ಸೇವನೆ ಮಾಡುವದು ತುಂಬಾ ಮುಖ್ಯವಾಗಿದೆ ಗರ್ಭಿಣಿ ಬಾಣಂತಿಯರು ಊಟ ಮಾಡುವಾಗ ತಟ್ಟಯಲ್ಲಿ ಹಸಿರು ತರಕಾರಿ ಸೋಪ್ಪು ಕಾಳುಗಳು ಹಣ್ಣುಗಳು ಸೇವನೆ ಮಾಡುವುದರಿಂದ ಗರ್ಣಿಯರಲ್ಲಿ ರಕ್ತಹೀನತೆ ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಹುಟ್ಟುವ ಮಗು ಅಪೌಷ್ಟಿಕವಾಗುವುದಿಲ್ಲ ತಾಯಿ ಮತ್ತು ಮಗು ಆರೊಗ್ಯವಂತರಾಗಿರುತ್ತಾರೆಂದು ಪೆÇೀಷಣ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಅವರು ದೀಪ ಬೆಳಗಿಸುವ ಮೂಲಕ ಪೆÇಷಣ ಮಾಸಾಚರಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ಸಾಮಿಕಿಬಾಯಿ ಮೇಲ್ವಿಚಾರಕಿ,ಗ್ರಾಮ ಪಂಚಾಯತ ಅಭಿವೃದ್ದಿ ಅಧೀಕಾರಿಗಳಾದ ಶ್ರೀಮತಿ ಪ್ರೆಮಿಲಾ ಹಾಗೂ ಗ್ರಾಮ ಪಂಚಾಯತ ಸದಸ್ಯರು ಗೋಪಾಲ, ಪರಶುರಾಮ , ಜಗನಾಥ , ನಸೀರ, ಸಂತೋಷ ಹಾಗೂ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀಮತಿ ವೈಶಾಲಿ ಜಗನಾಥ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀಮತಿ ಸಂಪತಿ ಸುಮಿತ್ರಾ ರವರು ಸ್ವಾಗತ ಗೀತೆ ಹಾಡಿದರು, ಶ್ರೀಮತಿ ಕಲಾವತಿರವರು ನಿರೂಪಣೆ ಮಾಡಿದರೆ ಶ್ರೀಮತಿ ಜಗದೇವಿ ರವರು ವಂದನಾರ್ಪಣೆ ಮಾಡಿದರು.