ರೇಷ್ಮೆ ಶಿಕ್ಷಣ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಕಲಬುರಗಿ:ಸೆ.17: ನಗರದ ರೇಷ್ಮೆ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಉತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನೆಯ ಕಾರಣಿಕರ್ತರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಪದವಿ ಕಾಲೇಜಿನ ಪ್ರಾಚಾರ್ಯರಾದ ಶರಣಗೌಡ ಪಾಟೀಲ್ ಧ್ವಜಾರೋಹಣವನ್ನು ನೆರವೇರಿಸಿದರು ಕಾರ್ಯಕ್ರಮದಲ್ಲಿ ಅಮರಪ್ಪ ತಾಳಿಕೋಟಿ ಸುರೇಖಾ ಪಾಟೀಲ್ ಡಾಕ್ಟರ್ ರಾಜಶೇಖರ್ ಸಿರ್ವಾಳ್ಕರ್ ಡಾ. ಓಂ ಪ್ರಕಾಶ್ ಅನಿಲ್ ಜಾದವ್ ಮೈಬೂಬ್ ಶರಣಪ್ಪ ಚವಾನ್ ಶ್ರೀಶೈಲ ಮಠಪತಿ ಶ್ರೀಶೈಲ ಹಳ್ಳಿ ಜೈ ಲಕ್ಷ್ಮಿ ಪಾಟೀಲ್ ಫಕ್ರುದ್ದೀನ್ ಮಮ್ಮದ್ ವಾಜಿಮ್ ವಿದ್ಯಾರ್ಥಿ ವೃಂದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು