ಪ್ರತಿಯೊಬ್ಬರಿಗೂ 371 ಜೆ ಕಲಂ ಕುರಿತು ಅರಿವು ಇರಲಿ
ಕಲಬುರಗಿ :ಸೆ.17: 371-ಜೆ ಕಲಂ ಬಗ್ಗೆ ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬರಿಗೂ ಅದರ ತಿಳಿವಳಿಕೆ ಇರಬೇಕೆಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ 75ನೇ ಕಲ್ಯಾಣ (ಹೈದ್ರಾಬಾದ) ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 371-ಜೆ ಕಲಂನಲ್ಲಿ ಈ ಭಾಗದ ಅಭಿವೃದ್ಧಿಯ ಸಮಗ್ರ ಮಾಹಿತಿ ಇದೆ. ಅದರ ಅರಿವಿನ ಜೊತೆಗೆ ಸದುಪಯೋಗ ಪಡೆದುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಅಂದಾಗ ಮಾತ್ರ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಳೆ ಬರುತ್ತದೆ. ದೇಶ ಸ್ವಾತಂತ್ರ್ಯವಾದರೂ ರಜಾಕರ ಹಾವಳಿಗೆ ಈ ಭಾಗದ ಜಿಲ್ಲೆಗಳು ತತ್ತರಿಸಿ ಹೋಗಿದ್ದವು. ಈ ಭಾಗದ ನೂರಾರು ಜನರು ಮತ್ತು ಸರದಾರ ವಲ್ಲಭಬಾಯಿ ಪಟೇಲ ಅವರ ನಿರಂತರ ಹೋರಾಟದಿಂದ ಒಂದು ವರ್ಷದ ನಂತರ ಸ್ವಾತಂತ್ರ್ಯ ಸಿಕ್ಕಿತು. ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸಹ ಈ ಹೋರಾಟದಲ್ಲಿ ಭಾಗವಹಿಸಿ ರಜಾಕರ ಕಪಿಮುಷ್ಠಿಯಿಂದ ಬಿಡಿಸಲು ಪ್ರಮುಖ ಪಾತ್ರ ವಹಿಸಿದರು. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಶೈಕ್ಷಣಿಕ ಕ್ರಾಂತಿ ಮಾಡುವುದರ ಮೂಲಕ ಈ ಭಾಗಕ್ಕೆ ಅಂಟಿದ ಹಿಂದುಳಿದ ಪಟ್ಟಿಯನ್ನು ತೆಗೆದು ಹಾಕಲು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ ಇನ್ನೂ ಉತ್ತುಂಗಕ್ಕೆ ಕೊಂಡೊಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರÀ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ, ಪ್ರಾಚಾರ್ಯರಾದ ಡಾ.ಎಂ.ಆರ್.ಹುಗ್ಗಿ, ಡಾ.ಪುಟ್ಟಮಣಿ ದೇವಿದಾಸ, ಬಾಬುರಾವ ಚವ್ಹಾಣ, ಬಸವರಾಜ ಮಾದಗೊಂಡ, ಶ್ರೀಮತಿ ಅನಿತಾ ಕನಶೆಟ್ಟಿ, ಡಾ.ಕಲ್ಪನಾ ಭೀಮಳ್ಳಿ, ಜಗದೀಶ ಬಿಜಾಪೂರೆ, ವಿನೋದ ಪತಂಗೆ, ಕಂಡೆರಾಯ, ಶರಣಬಸವಪ್ಪ ಮಾಲಿಪಾಟೀಲ, ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ನಾಗಮ್ಮ ನಿಂಗದೆ ಮತ್ತು ಶ್ರೀಮತಿ ರಜನಿ ಬಸವರಾಜ ನಿರೂಪಿಸಿದರು.