ಹೈದ್ರಾಬಾದ ಕರ್ನಾಟಕದ ವಿಮೋಚನಾ ಶಿಲ್ಪಿ ಸರದಾರ ವಲ್ಲಭಭಾಯಿ ಪಟೇಲ : ಡಾ. ಪಿ. ವಿಠ್ಠಲ ರಡ್ಡಿ
ಬೀದರ :ಸೆ.17: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರ ಅಮೃತ ಹಸ್ತದಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಭಾರತದ ಉಕ್ಕಿನ ಮನುಷ್ಯರಾದ ಡಾ. ಸರದಾರ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರ ಅದರ ವಿಶೇಷವೆಂದರೆ, ಭಾರತವು 1947 ಅಗಷ್ಟ 15ರಂದು ಸ್ವಾತಂತ್ರ್ಯವಾದರೆ, ನಮ್ಮ ಭಾಗ ಅಂದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ, ಕಲಬುರಗಿ, ರಾಯಚೂರ, ಬಳ್ಳಾರಿ, ಕೊಪ್ಪಳ ಮತ್ತು ಯಾದಗಿರ ಈ ಜಿಲ್ಲೆಗಳು ಹೈದ್ರಾಬಾದ ನಿಜಾಮನ ಕಪಿಮುಷ್ಟಿಯಲ್ಲಿದ್ದವು ಆತನ ಘೋಷಣೆಯೆಂದರೆ, ಭಾರತದ ಮೋಡಗಳು ಸಹ ನಮ್ಮ ಸಂಸ್ಥಾನದ ಮೇಲೆ ಬಂದರೆ ಇಲ್ಲಿನ ಹಿಂದುಗಳ ರುಂಡ ಹಾರಿಸುತ್ತೇನೆ ಎಂದು ಘೋಷಿಸಿದನು. ಆದರೆ, ಪಟೇಲರು ಇದಕ್ಕೆ ಪ್ರತಿ ಉತ್ತರ ನೀಡುತ್ತಾ ಈ ಭಾಗದ ಹಿಂದುಗಳ ದಯನೀಯ ಸ್ಥಿತಿಕಂಡು ನ್ಯಾಯ ಒದಗಿಸಬೇಕೆಂದು ಪೋಲಿಸ ಕಾರ್ಯಚರಣೆ ನಡೆಸಿ ಇಲ್ಲಿನ ಹಿಂದುಗಳಿಗೆ ಅಭಯ ನೀಡಿ ರಾಕ್ಷಸ ಪ್ರವೃತಿವುಳ್ಳನಾದ ನಿಜಾಮ-ಉಲ್-ಮುಲ್ಕ್-ಅಸಾಫ್-ಝಾ ಇತನು ಈ ಭಾಗದ ಏಳನೇಯ ನಿಜಾಮನಾಗಿದ್ದ ಈ ಕಾರ್ಯಚರಣೆಯಿಂದ ಆತನು ಶರಣಾಗುವಂತೆ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಅಂದು ಭಾರತ ದೇಶದ ಪಂಜಾಬಿನ ಜಲೀಯನ್ ವಾಲಾಬಾಗನಲ್ಲಿ ಜನರಲ್ ಡಯರ್ ಕ್ರಿ.ಶ. 1919ರಲ್ಲಿ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಗೋಲಿಬಾರ ನಡೆಸಿ ಹಲವಾರು ಸ್ವಾತಂತ್ರ್ಯ ಚಳುವಳಿಯ ಜನರ ಮೇಲೆ ಗುಂಡಿನ ಮಳೆಗೇರೆದನು, ಅದೇ ಮಾದರಿಯಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮವು ಬ್ರಿಟಿಷರ ಗುಂಡಿಗೆ ಹಲವಾರು ಸ್ವಾತಂತ್ರ್ಯ ಸೇನಾನಿಗಳು ಪ್ರಾಣಾರ್ಪಣೆ ಮಾಡಿದರು. ಈ ಎಲ್ಲಾ ಘಟನೆಗೆ ನಿಜಾಮನೆ ಕಾರಣನೆಂದು ಪೋಲಿಸ ಕಾರ್ಯಚರಣೆ ಮಾಡಿಗ ಆತನು ಅಂದರೆ ನಿಜಾಮನು ಸೆಪ್ಟೆಂಬರ್ 17ನೇ ಸಾಯಂಕಾಲ ವಿಶ್ವಸಂಸ್ಥೆಯ ನಿರ್ದೇಶದಂತೆ, ಪಟೇಲರಿಗೆ ಶರಣಾಗತನಾಗಿ ತನ್ನ ಸಂಸ್ಥಾನ ಭಾರತದ ಅಧೀನದಲ್ಲಿ ಇಂದಿನಿಂದ ಸೇರುತ್ತದೆ ಎಂದು ಸಹಿ ಮಾಡಿದ ಪತ್ರವನ್ನು ಪಟೇಲರಿಗೆ ನೀಡಿದನು. ಅಂದಿನಿಂದ ಈ ಭಾಗದ ಜನರಿಗೆ ಸ್ವಾತಂತ್ರ್ಯದ ಕಹಳೆ ಊದಲು ಸಾದ್ಯವಾಯಿತು ಅಂದಿನ ಸ್ವಾತಂತ್ರ್ಯ ಪರಿಕಲ್ಪನೆಯನ್ನು ಇಂದಿನ ವಿದ್ಯಾರ್ಥಿಗಳು ಇತಿಹಾಸ ತಿಳಿದುಕೊಂಡು ನಮ್ಮ ಭಾಗ ಹಿಂದುಳಿದ ಭಾಗವಲ್ಲ ಮುಂದುವರೆಯುತ್ತಿರುವ ಭಾಗ ಎಂದು ತಿಳಿದು ನಾವು ಒಳ್ಳೆಯ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದು ಉನ್ನತ ಹುದ್ದೆಗಳನ್ನು ಪಡೆದು ತಮ್ಮ ತಂದೆ ತಾಯಿ ಹಾಗೂ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಬೇಕೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಪದವಿ ಪೂರ್ವ ಮಹವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಎನ್.ಸಿ.ಸಿ., ಎನ್.ಎಸ್.ಎಸ್. ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.