ವಂದೇ ಭಾರತ ರೈಲಿನಲ್ಲಿ ಸಂಚರಿಸಿ ವಿದ್ಯಾರ್ಥಿಗಳ ಸಂಭ್ರಮ
ಕಲಬುರಗಿ,ಮಾ.14-ಇದೇ ತಿಂಗಳ 12 ರಂದು ಚಾಲನೆ ನೀಡಲಾದ ಕಲಬುರಗಿಯಿಂದ ಬೆಂಗಳೂರು ವಂದೇ ಭಾರತ ರೈಲಿನಲ್ಲಿ ಸಂಚಾರ ಮಾಡುವುದರ ಮೂಲಕ ನಗರದ ಆರ್ಯನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಭ್ರಮಿಸಿದರು.
ವಂದೇ ಭಾರತ ರೈಲಿನಲ್ಲಿರುವ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಕೊಂಡಾಡಿದ್ದರಲ್ಲದೆ, ಕಲಬುರಗಿಯಿಂದ ಬೆಂಗಳೂರಿಗೆ ಅತಿ ಕಡಿಮೆ ಸಮಯದಲ್ಲಿ ತಲುಪುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಲಬುರಗಿಯಿಂದ ಬೆಂಗಳೂರಗೆ ಸಂಚರಿಸುವ ವಂದೇ ಭಾರತ ರೈಲು ಸಂಚಾರದ ಉದ್ಘಾಟನಾ ಸಮಾರಂಭ ಮತ್ತು ರಾಯಚೂರುವರೆಗೆ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಿದ ರೈಲ್ವೆ ಸಿಬ್ಬಂದಿ ಮತ್ತು ಆರ್ಯನ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.