ಲೋಕಾಯುಕ್ತ ದಾಳಿಗೆ ಸಿಕ್ಕಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಿ.ಆರ್.ಪಿ
ಸಂಜೆವಾಣಿ ವಾರ್ತೆ
ಹನೂರು ಮಾ 14 :- ರಜಾ ದಿನಗಳ ಎನ್‍ಕ್ಯಾಶ್‍ಮೆಂಟ್ ಅನ್ನು ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಮುತ್ತು ಸಿಆರ್‍ಪಿ ಮುನಿರಾಜು ಇಬ್ಬರು ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದಿದ್ದಾರೆ.
ಹನೂರು ತಾಲೂಕಿನ ತೋಮಿಯರ್ ಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ವಿಜಯಕುಮಾರ್ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿನ 139 ದಿನಗಳ ಇ.ಎಲ್,ಎನ್‍ಕ್ಯಾಶ್‍ಮೆಂಟ್ ಅನ್ನು ಮಂಜೂರು ಮಾಡಲು ಬಿಇಒ ಶಿವರಾಜು ಅವರಿಗೆ ಮನವಿ ಮಾಡಿದ್ದಾರೆ.
ಎನ್‍ಕ್ಯಾಶ್‍ಮೆಂಟ್ ಅನ್ನು ಮಂಜೂರು ಮಾಡಲು 15000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಿವೃತ್ತ ಶಿಕ್ಷಕ ವಿಜಯಕುಮಾರ್ ಎಸ್/ಓ ಲೇಟ್ ಜೇಕಬ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಇಂದು ಚಾಮರಾಜನಗರ ಕೆಎಲ್‍ಎಯಿಂದ ಯಶಸ್ವಿ ಬಲೆ ಬೀಸಲಾಗಿದ್ದು ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಮುತ್ತು ಸಿಆರ್‍ಪಿ ಮುನಿರಾಜು ಇಬ್ಬರು ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದಿದ್ದಾರೆ.
ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದಾಳಿ ನಡೆಸಿದ ಚಾಮರಾಜನಗರ ಪಿ.ಐ ಲೋಹಿತ್ ಕುಮಾರ್ ಮತ್ತು ತಂಡ ದಾಳಿ ನಡೆಸಿದ್ದಾರೆ. ಬಿಇಒ ಮತ್ತು ಸಿಆರ್ ಪಿ ಇಬ್ಬರನ್ನು ವಶಕ್ಕೆ ಪಡೆದು ವಸೂಲಿ ಮಾಡಿದ ಲಂಚದ ಹಣದ ತನಿಖೆಯನ್ನು ಮುಂದುವರಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.