ರಾಸಾಯನಿಕ ಮುಕ್ತ ಆಹಾರದಿಂದ ಆರೋಗ್ಯಕರ ಜೀವನ ನಡೆಸಬಹುದು-ಶೃತಿಕುಮಾರಸ್ವಾಮಿ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.14- ಯಾವುದೇ ರಾಸಾಯನಿಕವನ್ನು ಬಳಸದೆ ಆಹಾರವನ್ನು ಮಾಡಿದರೆ ಆರೋಗ್ಯಕರವಾದ ಜೀವನವನ್ನು ನಡೆಸಬಹುದು ಎಂದು ಶೃತಿಕುಮಾರಸ್ವಾಮಿ ತಿಳಿಸಿದರು.
ಅವರು ನಗರದ ಜೆಎಸ್‍ಎಸ್ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೃಹತ್ ಆಹಾರ ಮೇಳವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಹಾರ ಮೇಳವು ಬಹಳ ಚೆನ್ನಾಗಿ ಮೂಡಿ ಬಂದಿದೆ. ವಿಧವಿಧವಾದ ಆಹಾರಗಳನ್ನು ಬಹಳ ರುಚಿಕರವಾಗಿ ಮಾಡಿದ್ದಾರೆ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಡಿಗಾಲ ಆರ್.ಕುಮಾರಸ್ವಾಮಿ, ಮಹದೇವಸ್ವಾಮಿ, ದೇವರಾಜಮೂರ್ತಿ, ವಿನಯ್‍ಕುಮಾರ್, ಪ್ರಾಂಶುಪಾಲಡಾ. ಕೆ.ಸಿ. ಬಸವಣ್ಣ,ಬಿಎಡ್ ಪ್ರಶಿಕ್ಷಣಾರ್ಥಿಗಳಾದ ಸೋನಾಕ್ಷಿ, ಸಹನಾ, ನಿವೇದಿತ, ವೇದಶ್ರೀ, ಮೋನಿಕಾ, ಶಿಲ್ಪ, ಇಂಚರ, ಸ್ಫೂರ್ತಿ, ಅನುμÁ, ವಿಜಯ್‍ಕುಮಾರ್, ಯೋಗೀಶ್, ಮಹೇಂದ್ರ, ದಾಕ್ಷಾಯಿಣಿ, ಕಾವ್ಯ ಮುಂತಾದವರು ಭಾಗವಹಿಸಿದ್ದರು.