ವಿಜಯಪುರ ಜಿಲ್ಲೆಗೆ ಬೃಹತ್ ಪವನ ವಿದ್ಯುತ್ ಘಟಕ: ಸಚಿವ ಎಂ.ಬಿ. ಪಾಟೀಲ ಕಾರ್ಯ ಶ್ಲಾಘನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.14:ದೇಶದ ಎರಡನೇ ದೊಡ್ಡ ಪವನ ವಿದ್ಯುತ್ ಘಟಕವನ್ನು ತವರು ಜಿಲ್ಲೆ ವಿಜಯಪುರಕ್ಕೆ ತರಲು ಶ್ರಮಿಸುವುದರ ಮೂಲಕ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೈಗಾರಿಕಾ ಕ್ರಾಂತಿಗೆ ಮುಂದಡಿ ಇಡುವುದರ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕು ಕಟ್ಟಿಕೊಡಲು ಮುಂದಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಡಾ. ಎಂಬಿ ಪಾಟೀಲ ಆವರ ಕಾರ್ಯವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಶ್ಲಾಘಿಸಿದ್ದಾರೆ.
ಎಂ.ಬಿ. ಪಾಟೀಲ ಆವರು ನೀರಾವರಿ ಸಚಿವರಾಗಿದ್ದಾಗ 2013 ರಿಂದ 2018 ಬಸವ ನಾಡಿನಲ್ಲಿ ನೀರಾವರಿ ಕ್ರಾಂತಿ ಮಾಡಿದ್ದಾರೆ. ಜನತೆಯ ಪಾಲಿಗೆ ಅದೊಂದು ನೀರಾವರಿ ಕ್ಷೇತ್ರದ ಅಭಿವೃದ್ಧಿಯ ಸುವರ್ಣ ಯುಗವಾಗಿತ್ತು ಎಂ ಬಿ ಪಾಟೀಲರ ಕರ್ತೃತ್ವ ಶಕ್ತಿ, ದೂರ ದೃಷ್ಟಿಯಿಂದಾಗಿ ಬರದ ನಾಡು ಬಂಗಾರದ ನಾಡಾಗಿ ಇಂದು ಕಡು ಬೇಸಿಗೆಯಲ್ಲಿ ಜನ ನೆಮ್ಮದಿಯ ನೆಟ್ಟುಸಿರು ಬಿಡಲು ಕಾರಣವಾಗಿದೆ. ಅಂದು ಹಸಿರು ಕ್ರಾಂತಿ ಮಾಡಿದ ಪಾಟೀಲರು ಮತ್ತೆ ತಮ್ಮ ಪ್ರಾಮಾಣಿಕ ಕಳಕಳಿ ಮತ್ತು ಪ್ರಯತ್ನದಿಂದ ಕೈಗಾರಿಕಾ ಕ್ರಾಂತಿ ಮಾಡಲು ಮುಂದಾಗಿರುವುದು ಸೌರ ವಿದ್ಯುತ್ ಕ್ಷೇತ್ರದ ದೈತ್ಯ ಕಂಪನಿಗಳಾಗಿರುವ ಸುಜ್ಞಾನ ಮತ್ತು ರೇನಸಾನ್ಸ್ ಕಂಪನಿಗಳು 36,000 ಕೋಟಿ ಹೂಡಿಕೆ ಮಾಡಲು ಮುಂದಾಗಿರುವುದು ಜಿಲ್ಲೆಯ ಜನತೆಗೆ ಸಂತೋಷವನ್ನುಂಟು ಮಾಡಿದೆ ಎಂದು ಬಬಲೇಶ್ವರ ಹೇಳಿದ್ದಾರೆ.