ಅನಂತಕುಮಾರ ಹೆಗಡೆ ಅವರನ್ನು ಗಡಿಪಾರು ಮಾಡಲು ಶಶಿಕುಮಾರ ಗೆಜ್ಜಿ ಆಗ್ರಹ
ಯಡ್ರಾಮಿ:ಮಾ.14:ವಿಶ್ವದ ಸರ್ವಶ್ರೇಷ್ಠ ಸವಿಧಾನ ಭಾರತ ಸಂವಿಧಾನ ಅಂತಹ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು.
ಎಂದು ಶಶಿಕುಮಾರ ಗೇಜ್ಜಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಯಡ್ರಾಮಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿ.ಭಾರತ ದೇಶದಲ್ಲಿ ವಿವಿಧ ಧರ್ಮ,ವಿವಿಧ ಜಾತಿ,ವಿವಿಧ ಸಂಸ್ಕøತಿ ಹೊಂದಿದ ದೇಶದಲ್ಲಿ ಅಶಾಂತಿ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.
ಸಂವಿಧಾನ ನ್ಯಾಯ,ಸ್ವಾತಂತ್ರ್ಯ,ಸಮಾನತೆ ಮತ್ತು ಸಹೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನವನ್ನು ಪದೇ ಪದೇ ಬದಲಾಯಿಸುವ ಹೇಳಿಕೆಗಳನ್ನು ನೀಡುತ್ತಿರುವ ಸಂಸದ ಅನಂತಕುಮಾರ ಅವರನ್ನು.
ಕೇಂದ್ರ ಬಿಜೆಪಿ ಸರ್ಕಾರವಾಗಲಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ.ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತಿದ್ದಾರೆ.
ಹಿಂತಹ ಮಾನಸಿಕ ಅಸ್ವಸ್ಥರನ್ನು ಕೂಡಲೇ ಭಾರತ
ದೇಶದಿಂದ ಉಗ್ರಹವಾದ ಶಿಕ್ಷೆ ನೀಡಿ ಗಡಿಪಾರು ನೀಡಬೇಕು ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಭಾರತ ಮಾಡಲು ಭಾರತದ ತುಂಬ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದ್ದಾರೆ.