ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕಾಗಿದೆ

ಸಂಜೆವಾಣಿ ವಾರ್ತೆ
ದಾವಣಗೆರೆ ಮಾ.೧೩; ಪ್ರಸ್ತುತ ದಿನಮಾನಗಳಲ್ಲಿ ನವ ಯುವಕ, ಯುವತಿಯರು ಕಾಲೇಜುಗಳಲ್ಲಿ ಕೇವಲ ಪಠ್ಯಪುಸ್ತಕ ಅಂಕಪಟ್ಟಿ ಪದವಿಗಳಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯೊಂದಿಗೆ ಮುಂದಿನ ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿಯಿಂದ ಬದ್ಧತೆಯಿಂದ ಕಾಳಜಿಯೊಂದಿಗೆ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಾಗಿದೆ ನಮ್ಮ ದೇಶದ ಈ ಲೋಕಸಭಾ ಚುನಾವಣೆ ಐದು ವರ್ಷಕ್ಕೊಮ್ಮೆ ಉತ್ತಮ ಆಡಳಿತಕ್ಕೆ ಪರಿವರ್ತನೆಗೆ ಯಾವುದೇ ಜಾತಿ ಮತದ ಭೇದಭಾವ ಇಲ್ಲದೇ ನಾಗರಿಕರು ಸಾಮಾಜಿಕ ಕಾಳಜಿಯೊಂದಿಗೆ ಮತ ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿಯವರು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ಕಲಾ ಕುಂಚ ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಕವಿಗೋಷ್ಠಿ ಸಮಾರಂಭವನ್ನು ತುಳಿಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಚಿತ್ರದುರ್ಗದ ಸುದ್ದಿ ಗಿಡುಗ ದಿನಪತ್ರಿಕೆಯ ಸಂಪಾದಕರಾದ ಶ.ಮಂಜುನಾಥ್ ಮಾತನಾಡಿ ಚುನಾವಣೆ ಆಯೋಗ ನಿಯೋಗ ಚುನಾವಣೆ ಗಾಗಿ ಪೂರ್ವ ಸಿದ್ಧತೆ ಮಾಡುತ್ತಿರುವುದು ಸಹಜ ಸರ್ವೇಸಾಮಾನ್ಯ ಆದರೆ ಯಾವುದೇ ಸಾರ್ವಜನಿಕ ಸಂಘಟನೆಗಳು ಮಾಡದಂತಹ ಮತದಾನದ ಜಾಗೃತಿ ಕುರಿತು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಕೆಲವು ರಾಜಕೀಯ ಪಕ್ಷಗಳು ಕೇವಲ ಪ್ರಚಾರಕ್ಕೋಸ್ಕರ ಓಟಿಗಾಗಿ ಅಧಿಕಾರಕ್ಕಾಗಿ ತೊಡಗಿಸಿಕೊಂಡು ಸಮಾಜದ ಸಂಸ್ಕಾರ ಸಂಸ್ಕೃತಿ ಸಾಮಾಜಿಕ ಕಾಳಜಿಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಿರಿಯ ಹಿರಿಯ ಕವಿ ಕವಿಯತ್ರಿಯರು ಮತದಾನ ಜಾಗೃತಿ ಕುರಿತು ಒಳ್ಳೊಳ್ಳೆ ಸಂದೇಶಗಳನ್ನು ಅಕ್ಷರ ಜ್ಞಾನದೊಂದಿಗೆ ಅರ್ಥಪೂರ್ಣವಾಗಿ ಕವನ ವಾಚನ ಮಾಡಿದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹಿರಿಯ ಕವಿ ಪರಮೇಶ್ವರಯ್ಯ ವೀರಭದ್ರಯ್ಯ ಮಠದ ಕಲಾಕುಂಚದ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಮತದಾನದ ಕುರಿತು ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಉದಾಸೀನತೆ ಬಿಟ್ಟು ಕಡ್ಡಾಯವಾಗಿ ಮತ ಚಲಾಯಿಸಬೇಕು ಇದು ನಮ್ಮ ನಿಮ್ಮೆಲ್ಲರ ಆಜನ್ಮ ಹಕ್ಕು ಎಂದರು.