ಕೆರೆ ತಡೆಗೋಡೆ ಅಭಿವೃದ್ದಿಗೆ ಮೊದಲ‌ಕಂತಿನ ಅನುದಾನ ಬಿಡುಗಡೆ

ಸಂಜೆವಾಣಿ ವಾರ್ತೆ
ಜಗಳೂರು.ಮಾ.೧೩: ತಾಲೂಕಿನ ಚಿಕ್ಕಮ್ಮನಟ್ಟಿ ಗ್ರಾಮದಲ್ಲಿ 3.5 ಕೋಟಿ ವೆಚ್ಚದಲ್ಲಿ ಕೆರೆ ತಡೆಗೋಡೆ ಅಭಿವೃದ್ದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು.ಮೊದಲ ಕಂತಿನಲ್ಲಿ 1.5 ಕೋಟಿ ಬಿಡುಗಡೆಯಾಗಿದೆ.ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗು ವುದು ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಸಂಸ್ಥೆವತಿಯಿಂದ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ಅಭಿವೃದ್ದಿಗೊಳಿಸಿದ ಕೆರೆ ಹಸ್ತಾಂತ  ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನನ್ನ ಸ್ವಗ್ರಾಮದ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಮೂಲಕ ಸಹಕರಿಸಿ ದ್ದಾರೆ.ಇದರ ಫಲವಾಗಿ ಧರ್ಮಸ್ಥಳ ಗ್ರಾಮಾಭಿ ವೃದ್ದಿ ಸಂಘ ದವರು ಗೋಕಟ್ಟೆಯನ್ನು ಸುಂದರ ವಿನ್ಯಾಸ ದ ಕೆರೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.