ಸಾಮಾಜಿಕ ಬದ್ದತೆಯುಳ್ಳ ಸಂಘಟನೆಗಳಿಗೆ ನೈತಿಕ ಬೆಂಬಲ; ಮಾದಾರಚೆನ್ನಯ್ಯ ಶ್ರೀ ಘೋಷಣೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೩: .  ಜನಪರವಾಗಿರುವಯಾವುದೇ ಸಂಘಟನೆಗಳಿಗೆ ನನ್ನ ಬೆಂಬಲವಿದೆ. ಸಾಮಾಜಿಕ ಬದ್ದತೆಯಿಟ್ಟುಕೊಂಡು ನಡೆಸುವ ಚಳುವಳಿಗಳನ್ನು ಬೆಂಬಲಿಸಿಕೊAಡು ಬಂದಿದ್ದು, ಮುಂದೆಯೂಅದೇ ಮಾದರಿಯ ಸಹಕಾರ ಸಿಗಲಿದೆ.ಆದರೆ ಸಂವಿಧಾನ, ಕಾನೂನು ಮೀರಿದ ನಡವಳಿಕೆಗಳಿಗೆ ಯಾವತ್ತೂ ಸಹಕಾರ ನೀಡುವುದಿಲ್ಲವೆಂದುಶ್ರೀ ಬಸವ ಮೂರ್ತಿಮಾದಾರಚೆನ್ನಯ್ಯ ಸ್ವಾಮೀಜಿ ಘೋಷಿಸಿದ್ದಾರೆಇಲ್ಲಿನ ಹಳೇ ಮಾದ್ಯಮಿಕ ಶಾಲಾ ಆವರಣದಲ್ಲಿಚಿತ್ರದುರ್ಗದ ವಿಜಯ ಸೇನೆ ಸಂಘಟನೆ ಹಮ್ಮಿಕೊಂಡಿದ್ದಕನ್ನಡ ಹಬ್ಬದ ಸಾಂಸ್ಕೃತಿಕಕಾರ್ಯಕ್ರಮದಲ್ಲಿಜನಪದ ಹಾಡುಗಾರಮಳವಳ್ಳಿಯ ಡಾ. ಮಹಾದೇವ ಸ್ವಾಮಿಅವರಿಗೆರಾಜವೀರ ಮದಕರಿ ನಾಯಕ ಪ್ರಶಸ್ತಿ ಹಾಗೂ ತುಮಕೂರಿನಖ್ಯಾತ ಲೇಖಕಿ ಬಾ.ಹ.ರಮಾಕುಮಾರಿಅವರಿಗೆ ವೀರ ವನಿತೆ ಒನಕೆ ಓಬವ್ವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರುಸಮಾಜದಲ್ಲಿ ಇಂದಿಗೂ ಹಲವಾರು ಸಂಘಟನೆಗಳು ಉತ್ತಮಕಾರ್ಯ ಮಾಡುತ್ತಿವೆ. ಸಮಾಜದ ಕೆಲಸ ಮಾಡುವ ವೇಳೆ ಎದುರಾಗುವಯಾವುದೇಟೀಕೆ, ಟಿಪ್ಪಣಿ ಬಗೆಗಿನ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗಿ ಕೆಲಸ ಮಾಡಬೇಕು.ಜನಪರ ಮತ್ತು ಸಂವಿಧಾನದಅಡಿಯಲ್ಲಿ ನಡೆಯುವ ಚಳುವಳಿಗಳಿಗೆ ನಮ್ಮ ಬೆಂಬಲವಿದೆ. ಕೆಲವೊಮ್ಮೆ ಕಾನೂನು ವ್ಯಾಪ್ತಿ ಮೀರಿಯೂ ಸದುದ್ದೇಶ ಹೊಂದಿ ನಡೆಯುವ ಚಳುವಳಿಗಳಿಗೂ ಬೆಂಬಲ ಸಿಗಬೇಕು ಎಂಬುದಕ್ಕೆ ನಮ್ಮಅಭಿಮತವಿದೆಎಂದು ಹೇಳಿದರುಚಿತ್ರದುರ್ಗದಲ್ಲಿ ವಿಜಯ ಸೇನೆ ನಿಜಕ್ಕೂಒಂದುಉತ್ತಮಉದ್ದೇಶ, ಗುರಿಯಿಟ್ಟುಕೊಂಡು ಕೆಲಸ ಮಾಡುತ್ತಿದೆ. ಅದರ ಸಾರಥ್ಯವಹಿಸಿರುವ ಕೆ.ಟಿ.ಶಿವಕುಮಾರ್ ಅವರಿಗೆ ನಿಜಕ್ಕೂ ಈ ನೆಲದ ಬಗ್ಗೆ ಕಾಳಜಿ, ಬದ್ದತೆಯಿದೆ.ಒಮ್ಮೊಮ್ಮೆ ಸಿಕ್ಕಾಗ ಕಾನೂನು, ಸಂವಿಧಾನದ ಬಗ್ಗೆ ತಿಳಿ ಹೇಳಿರುವುದಾಗಿಯೂ ಶ್ರೀಗಳು ನುಡಿದರು