ಶಿವಮೊಗ್ಗ ಕ್ಕೆ ಪ್ರಧಾನಿ ಭೇಟಿ: ಮಾ. 18ಕ್ಕೆ ನಿಗದಿ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ.೧೩: ಪ್ರಧಾನಿ ನರೇಂದ್ರ‌ ಮೋದಿ ಅವರ ಶಿವಮೊಗ್ಗ ಭೇಟಿ ಮಾ. 17ರ ಬದಲಿಗೆ ಮೇ 18ರಂದು ನಿಗದಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು‌ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದು.  ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ,ದಾವಣಗೆರೆ, ಉಡುಪಿ ಕ್ಷೇತ್ರಕ್ಕೆ ಸಂಬಂಧಿಸಿ ಈ  ಕಾರ್ಯಕ್ರಮ   ರೂಪಿಸಲಾಗಿದೆ ಎಂದರು.ಸುಮಾರು 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ.  ಮೈದಾನದ ಸುತ್ತಲೂ ಎಲ್ ಇ ಡಿ ಟಿವಿ‌ ಮೂಲಕ ವೀಕ್ಷಣೆಗೆ ಅನುವು ಕಲ್ಪಿಸಲಾಗುವುದು ಎಂದರು.ಸಿಎಎ ಬಗ್ಗೆ ತಪ್ಪು ಪ್ರಚಾರ ಮಾಡಲಾಗುತ್ತಿದೆ. ಇದು ಜನರನ್ನು, ಸಮಾಜವನ್ನು  ಸೇರಿಸುವ  ಕೆಲಸ. ಮೋದಿ ವ್ಯಕ್ತಿತ್ವವೇ ಗ್ಯಾರಂಟಿ. ಕಾಂಗ್ರೆಸ್ ಗ್ಯಾರೆಂಟಿಯೆ ಬೇರೆ, ಬಿಜೆಪಿ ಗ್ಯಾರೆಂಟಿಯೇ ಬೇರೆ ಎಂದರು.