ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿದರೆ ಪರಮಾತ್ಮನು ಮೆಚ್ಚುತ್ತಾನೆ: ಡಿ.ಕೆ.ಗಣಪತಿ
ಬೀದರ್ :ಮಾ.13: ಮನುಷ್ಯರು ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿದರೆ ಪರಮಾತ್ಮನು ಮೆಚ್ಚುತ್ತಾನೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಮತ್ತು ಜೀವನದಲ್ಲಿ ನೆಮ್ಮದಿ ಇರುತ್ತದೆ. ಬದುಕು ಸಾರ್ಥಕವಾಗುತ್ತದೆ ಎಂದು ಡಿ.ಕೆ.ಗಣಪತಿ, ಬೀದರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ನುಡಿದರು. ನಗರದ ವಿವೇಕಾನಂದ ಬಡಾವಣೆಯ ಪಂಚಾಕ್ಷರ ನಿಲಯದಲ್ಲಿ ಪೆÇ್ರ ಎಸ್.ವಿ.ಕಲ್ಮಠ ಪರಿವಾರದ ವತಿಯಿಂದ ಹಮ್ಮಿಕೊಂಡ ಬಡಾವಣೆ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೆÇ್ರ. ಎಸ್.ವಿ.ಕಲ್ಮಠ ಅವರು ವಿಜ್ಞಾನ ಸಾಹಿತ್ಯ, ಸಂಗೀತ ಮತ್ತು ಸಮಾಜೋಧಾರ್ಮಿಕ ಕಾರ್ಯ ಚಟುವಟುಕೆಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ. ವಿವೇಕನಂದ ಬಡಾವಣೆಯ ನಿವಾಸಿ ಸೂರ್ಯಕಾಂತ ಮಾಳಗೆ(ಸೇವಾ ನಿವೃತ್ತರು), ಶಶಿಕಾಂತ ಶೆಂಬೆಳ್ಳಿ ಪ್ರಜಾವಾಣಿ ಪತ್ರಿಕಾ ಜಿಲ್ಲಾ ವರದಿಗಾರರು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕøತರು ಹಾಗು ಡಾ.ಶರಣಪ್ಪ ಮಲಗೊಂಡ ಇವರು ಬೀದರ ವಿಶ್ವ ವಿದ್ಯಾಲಯದ ಡೀನ್ ಆಗಿ ನೇಮಕಗೊಂಡಿರುವ ಪ್ರಯುಕ್ತ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಪೆÇ್ರ.ಕಲ್ಮಠ ಪರಿವಾರದವರ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆಂದು ಅವರು ನುಡಿದರು.
ಪೆÇ್ರ.ಎಸ್.ವಿ.ಕಲ್ಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜೀವನದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಹಿರಿಯರ ಕರ್ತವ್ಯವಾಗಿರುತ್ತದೆ. ಇದರಿಂದ ಸಾಧಕರಿಗೆ ಪೆÇ್ರೀತ್ಸಾಹ ಸಿಗುತ್ತದೆ. ಇನ್ನೊಬ್ಬರ ಸಾಧನೆ ಕೀರ್ತಿಯಲ್ಲಿ ನಾವು ಸಂತೋಷ ಪಡಬೇಕು. ಸಮಾಜ ಮತ್ತು ದೇಶ ವಿಕಾಸ ಹೊಂದುವುದಕ್ಕೆ ಇದು ಪೂರಕ. ಪ್ರೀತಿ,ವಿಶ್ವಾಸ,ಪರಸ್ಪರ ಸೌಹಾರ್ದತೆಯಿಂದ ಬದುಕುವುದು ಸಮಾಜದಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಈ ಮೊದಲು ಎಲ್ಲಾ ಸಾಧಕರಿಗೆ ಅವರ ಪರಿವಾರದ ವತಿಯಿಂದ ಸನ್ಮಾನ ಮಾಡಿದರು. ಸನ್ಮಾನ ಸ್ವೀಕರಿಸಿದ ಸಾಧಕರು ತಮ್ಮ ಅನಿಸಿಕೆ ಸಂತೋಷ ವ್ಯಕ್ತ ಪರಿಸಿದರು.
ಸಂಜೀವಕುಮಾರ ಸಜ್ಜನ ಅಧ್ಯಕ್ಷರು ವಿವೇಕಾನಂದ ಬಡಾವಣೆಯ ಮಿತ್ರ ಮಂಡಳಿ ಸ್ವಾಗತಿಸಿದರು. ಶಿವಪುತ್ರ ಪಾಟೀಲ ನಿರೂಪಿಸಿದರು. ದೇವಿಪ್ರಸಾದ ಕಲಾಲ ವಂದಿಸಿದರು. ಶಾಂಭವಿ ಕಲ್ಮಠ ಪ್ರಾರ್ಥನಾ ಗೀತೆ ಹಾಡಿದರು. ವೈಜನಾಥ ರಡ್ಡಿ, ವಿಜಯಕುಮಾರ ಬೋಗಲೆ, ದಿಲೀಪ ಹುಲಸೂರೆ, ಕಾಶೀನಾಥರಾವ ಸಾಧಕರನ್ನು ಸನ್ಮಾನಿಸಿದರು. ಜೈಶೀಲಾ ರಾಜೇಶ್ವರಿ, ಜಗದೇವಿ, ಆರುಂಧತಿ, ವಿವೇಕ, ಪರಮೇಶ್ವರಿ, ಪಂಚಾಕ್ಷರಿ, ಬಾಬುರಾವ, ಸುಭಾಷ, ಶಿವಲೀಲಾ ಹಾಗು ಬಡಾವಣೆಯ ನಿವಾಸಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.