ಡಾ.ಸತ್ಯಾನಂದ ಪಾತ್ರೋಟಗೆ ವ್ಯೋಮಾ ವ್ಯೋಮ ಪ್ರಶಸ್ತಿ
ಕಲಬುರಗಿ,ಮಾ.13-ಪ್ರಸಕ್ತ ವರ್ಷದ ರಾಜ್ಯ ಮಟ್ಟದ ವ್ಯೋಮಾ ವ್ಯೋಮ ಪ್ರಶಸ್ತಿಗೆ ಜಾಜಿ ಮಲ್ಲಿಗೆ ಕವಿಯಾದ ಬಂಡಾಯ ಲೇಖಕರೂ ಆದ ಡಾ.ಸತ್ಯಾನಂದ ಪಾತ್ರೋಟ ಅವರನ್ನು ಸರ್ವಾನುಮತದಿಂದ ಆಯ್ಕೆ
ಮಾಡಲಾಗಿದೆ. ಪ್ರಶಸ್ತಿಯು 5,000/- ರೂಪಾಯಿ ನಗದು ಫಲಫುಷ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಡಾ.ಚೆನ್ನಣ್ಣ ವಾಲೀಕಾರ ಅವರ 82ನೇ ಹುಟ್ಟು ಹಬ್ಬದ ದಿನವಾದ ಏಪ್ರಿಲ್ 6 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಸಂಸ್ಥೆಯ ಉಪಾಧ್ಯಕ್ಷರಾದ ಪೆÇ್ರ.ಎಚ್.ಟಿ.ಪೆÇೀತೆ ತಿಳಿಸಿದ್ದಾರೆ.
ಸಂಸ್ಥೆ ಅಧ್ಯಕ್ಷರಾದ ಪ್ರೊ.ಸ್ವಾಮಿರಾವ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪದಾಧಿಕಾರಿಗಳ ಸಭೆಯಲ್ಲಿ ಡಾ.ಚೆನ್ನಣ್ಣ ವಾಲೀಕಾರ ಹುಟ್ಟು ಹಬ್ಬದ ಆಚರಣೆ ಹಾಗೂ ರಾಜ್ಯಮಟ್ಟದ ವ್ಯೋಮಾ ವ್ಯೋಮ ಪ್ರಶಸ್ತಿ ನೀಡುವ ಕುರಿತು ಸುಧೀರ್ಘವಾಗಿ ಚರ್ಚಿಸಿ ಸತ್ಯಾನಂದ ಪಾತ್ರೋಟ ಅವರನ್ನು ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಡಾ. ಕೆ.ಎಸ್. ಬಂಧು, ಅಪ್ಪಸಾಹೇಬ ವಾಲೀಕಾರ ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ.