ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಾರೆ: ಶೋಭಾ ವಿಶ್ವಾಸ
ವಿಜಯಪುರ,ಮಾ.13:ಮಾ.13:ನರೇಂದ್ರ ಮೋದಿ ಅವರು ಮೂರನೇ ಬಾರಿ ಮತ್ತೆ ಪಿಎಂ ಆಗಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಮೋದಿ ಹತ್ತು ವರ್ಷಗಳಲ್ಲಿ ದೇಶದ ಗೌರವ, ಭದ್ರತೆಗಾಗಿ ಕೆಲಸ ಮಾಡಿದ್ದಾರೆ. ಹಿಂದಿನ ಯುಪಿಎ ಸರ್ಕಾರ ಗೋಟಾಲಾ ಸರ್ಕಾರ ಎನ್ನಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಧಾನಿ ಹೋದರೆ ಎದ್ದುನಿಂತು ಗೌರವ ಕೊಡುತ್ತಿರಲಿಲ್ಲ. ಮೋದಿ ಪ್ರಧಾನಿ ಯಾದ ಮೇಲೆ ಬದಲಾಗಿದೆ.
ದೇಶದ ಸೈನ್ಯದ ದಿಕ್ಕು ಬದಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ.
ಯಾವುದೇ ದೇಶಕ್ಕೆ ಹೋದರೂ ಭಾರತಕ್ಕೆ ಗೌರವ ಸಿಗುತ್ತಿದೆ.
ಪ್ರಧಾನಿ ಮೋದಿ
ಜಿ 20 ಸಮ್ಮೇಳನ ಯಶಸ್ವಿಯಾಗಿ ಮಾಡಿದ ಕೀರ್ತಿ ಮೋದಿಯವರದ್ದು.
ದೇಶದ ಗೌರವ ಹೆಚ್ಚು ಮಾಡಿದ್ದಾರೆ
ಮೋದಿ ಎಲ್ಲೇ ಯಾವುದೇ ದೇಶಕ್ಕೆ ಹೋದರೂ ಗೌರವ ಸಿಗುತ್ತಿದೆ.
ಅಭಿವೃದ್ಧಿಯಲ್ಲಿ ದಾಪುಗಾಲು ಇಟ್ಟಿದೆ. ಬಡತನ ರೇಖೆ ಕೆಳಗಿನರನ್ನು ಮೇಲೆಕ್ಕೆತ್ತಲಾಗಿದೆ.
ರೈತರಿಗೆ ಸಹಾಯ ಮಾಡಿದ್ದಾರೆ.
11 ನೇ ಆರ್ಥಿಕ ಸ್ಥಾನದಲ್ಲಿದ್ದ ಭಾರತ 5 ನೇ ಸ್ಥಾನಕ್ಕೆ ಏರಿದೆ
2047 ಕ್ಕೆ ಭಾರತ ವಿಶ್ವಗುರು ಆಗಲಿದೆ ಎಂದರು.
ಶಿಲಾನ್ಯಾಸ ಮಾಡಿದ್ದ ಕಾಮಗಾರಿಗಳನ್ನು ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ
ಇದು ಮೋದಿ ಸರ್ಕಾರದ ಬದ್ಧತೆ.
ಹಿಂದಿನ ಸರ್ಕಾರಗಳು ಇಂಥ ಕೆಲಸ ಮಾಡಿಲ್ಲಾ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಹೆಚ್ಚಳ ಮಾಡಿದ್ದೇವೆ. ರೈಲ್ವೆಗೆ ಹೊಸ ಕಾಯಕಲ್ಪ ನೀಡಲಾಗಿದೆ.
ವಂದೇ ಭಾರತ ರೆಲ್ವೆ ಯೋಜನೆ ಮಾಡಲಾಗಿದೆ. ಎಲ್ಲಾ ರಂಗಗಳಲ್ಲಿ ಭಾರತ ಸಾಧನೆ ಮಾಡಿದೆ. ಮೋದಿಗೆ ಮತ್ತೇ ಅವಕಾಶ ನೀಡಿ ಎಂದು ಮನವಿ ಮಾಡಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಜನರು ಮೋದಿಗೆ ಬೆಂಬಲ ನೀಡುತ್ತಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ
370 ಕಲಂ ಬದಲಾವಣೆ ಮಾಡಿದ್ದೇವೆ. ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇವೆ.
ನರೇಂದ್ರ ಮೋದಿ ಹಾಗೂ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಕ್ಷೇತ್ರದಲ್ಲಿ ಸಹಜವಾಗಿ ಗೊಂದಲವಿದೆ.
ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲುವ ಕ್ಷೇತ್ರ. ಹಾಗಾಗಿ ಬೇಡಿಕೆಯಿದೆ.
ಉಡುಪಿ ಚಿಕ್ಕಮಗಳೂರ ಕ್ಷೇತ್ರದಲ್ಲಿನ ಜನರು
ನನಗೆ ಎರಡು ಬಾರಿ ಗೆಲ್ಲಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸ ಮಾಡಿದ್ದಾಗಿ ಕೇಂದ್ರ ಸಚಿವೆ
ಶೋಭಾ ಹೇಳಿದರು.
ಬೇರೆಯವರು ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ ಅವಮಾನ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಕೇಂದ್ರದ ನಾಯಕರು
ಉತ್ತರ ನೀಡುತ್ತಾರೆಂದು ಹೇಳಿದರು.
ಗೋಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು,
ಟಿಕೆಟ್ ಅಪೇಕ್ಷಿತರು
ಹೊರಗಿನವರು ಬಂದವರು ಮಾಡುತ್ತಿದ್ದಾರೆ.
ನಾನು ವಿಚಲಿತವಾಗಿಲ್ಲ. ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ.
ನಾನು ಪೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುವೆ ಗೆಲ್ಲುವೆ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುಟವಟಿಕೆ ಮಾಡಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ,
ನಾನು ಯಾವುದೇ ದ್ರೋಹ ಮಾಡಿಲ್ಲ. ಹೆತ್ತ ತಾಯಿಗೆ ದ್ರೋಹ ಮಾಡಿಲ್ಲ.
ಒಮ್ಮೆ ಪಕ್ಷದ ಟಿಕೆಟ್ ಕೊಟ್ಟರೆ ಮುಗೀತು
ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಕರಂದ್ಲಾಜೆ ತಿಳಿಸಿದರು.
ಪಕ್ಷ ದ್ರೋಹದಂತಹ
ಕೆಲಸ ಅವರು ಮಾಡಿರಬಹುದು ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. ತಮ್ಮ ಸೋಲಿನ ಬಗ್ಗೆ ಮತ್ತೊಬ್ಬರ ಬಗ್ಗೆ ಹೇಳುವುದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ನುಡಿದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ರೈತರನ್ನು ಮರೆತಿದೆ. ಕೇಂದ್ರ ಕೊಟ್ಟ 235 ಕೋಟಿ ಹಣ ರೈತರಿಗೆ ನೀಡಿಲ್ಲ
ರೈತರು ಸಂಕಷ್ಟದಲ್ಲಿದ್ದಾರೆ.
ಕೇಂದ್ರ ಹಣ ಕೊಡಲು ಸಿದ್ದವಿದೆ.
ಆದರೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ.
ಒಂದು ಲಕ್ಷ ಕೋಟಿ ಹಣ ಇಡಲಾಗಿದೆ.
ರಾಜ್ಯ ಸರ್ಕಾರ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ನೀಡಿಲ್ಲ.
33 ಸಾವಿರ ಕೋಟಿ ಫುಡ್ ಪೆÇ್ರಸೆಸ್ಸಿಂಗ್ ಗೆ ಕೇಂದ್ರ ಇಟ್ಟಿದೆ.
ಈ ಕುರಿತು ಕೆಲಸ ಮಾಡಲು
ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ
ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದಿದ್ದಾರೆ.
ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಆಸಕ್ತಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ
ಬೆಂಗಳೂರಿಗರಿಗೆ ಕುಡಿಯುವ ನೀರಿಲ್ಲ.
ಆದರೂ ಕಾವೇರಿಯಿಂದ
ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ
ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ನಮ್ಮ ಹಿರಿಯರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ಬದ್ಧ ಎಂದರು.