ರಾಜ್ಯ ಹಾಗೂ ಅಂತರರಾಜ್ಯ ಸೇರಿ 30ಆರೋಪಿಗಳ ದಸ್ತಗಿರಿ: ಎಸ್ಪಿ ಚನ್ನಬಸವಣ್ಣ ಎಸ್.ಎಲ್
ಬೀದರ:ಮಾ.13: ಕಳೆದ 15 ದಿನಗಳಲ್ಲಿ ಬೀದರ ಜಿಲ್ಲೆಯ 13 ಹಾಗೂ ಹೈದ್ರಾಬಾದನ 1 ಸೇರಿ ಒಟ್ಟು 14 ಪೆÇಲೀಸ್ ಠಾಣೆಗಳಲ್ಲಿ ದಾಖಲಾದ 29 ಸ್ವತ್ತಿನ ಜಾನುವಾರು ಮತ್ತು ಪಂಪಸೆಟ್ ಕಳವು ಪ್ರಕರಣಗಳಲ್ಲಿ ರಾಜ್ಯ ಹಾಗೂ ಅಂತರರಾಜ್ಯ ಕಳ್ಳರು ಸೇರಿದಂತೆ ಒಟ್ಟು 30 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಆರೋಪಗಳಿಂದ ನಗದು ಹಣ, ಬಂಗಾರ, ಬೆಳ್ಳಿ, 7 ಜಾನುವಾರುಗಳು, 6 ಪಂಪಸೆಟ್, ಮೂರು ನಾಲ್ಕು ಚಕ್ರದ ವಾಹನ, ನಾಲ್ಕು ದ್ವಿ- ಚಕ್ರ ವಾಹನ ಒಂದು ಆಟೋ ಸೇರಿ ಒಟ್ಟು 5496850 ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ ಭಾಲ್ಕಿ ಉಪ ವಿಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿತ್ತು. ರೈತರ ಹೊಲದಲ್ಲಿರುವ ಪಂಪಸೆಟಗಳನ್ನು ಕದ್ದುಕೊಂಡು ಹೋಗುತ್ತಿದ್ದರು. ಈ ಹಿಂದೆ ದಿನಾಂಕ 28-10-2023 ರಂದು ನಡೆದ ಭಾಲ್ಕಿಯ ಸಂಜೀವ ಬಿರಾದಾರ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂದಿಸಲಾಗಿದ್ದು ಇವನು ಹೈದ್ರಾಬಾದ್ ಮೂಲದವನಾಗಿದ್ದಾನೆ ಎಂದು ಹೇಳಿದರು.
ಬೀದರ ಜಿಲ್ಲೆಯಲ್ಲಿ 5 ರೌಡಿ ಶೀಟರಗಳಿಗೆ ಈಗಾಗಲೇ ಗಡಿಪಾರು ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ಕಳ್ಳತನ, ಮಾರಣಾಂತಿಕ ಹಲ್ಲೆಗಳಂತಹ 20 ಕೇಸುಗಳಿರುವ ಒಬ್ಬ ವ್ಯಕ್ತಿ ಮೇಲೆ ಗುಂಡಾ ಕಾಯ್ದೆಯಡಿ ಅರೆಸ್ಟ್ ಮಾಡಿ ಕಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಉಪ ಕರ್ಯರ್ಶಿ ಮೇಲೆ ಪಿಡಿಓ ಹಲ್ಲೆ ಮಾಡಿರುವ ಕುರಿತು ಬೀದರ ನಗರ ಪೆÇಲೀಸ್ ಠಾಣೆಯಲ್ಲಿ ಉಪ ಕರ್ಯರ್ಶಿಗಳು ದೂರು ನೀಡಿದ್ದು ಎಫ್.ಐ.ಆರ್ ದಾಖಲಾಗಿದೆ ಎಂದರು. ಬ್ಲೂವೆಲ್ ಮಾರಾಟ ಮಾಡುತ್ತಿದ್ದ 3 ಜನ ವ್ಯಕ್ತಿಗಳನ್ನು ಅರೆಸ್ಟ್ ಮಾಡಲಾಗಿದ್ದು ಇವರು ಮಹಾರಾಷ್ಟ್ರದ ಮೂಲದವರಾಗಿದ್ದು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಆರೋಪಿಗಳಿಂದ 950 ಗ್ರಾಂ ಅಂಬರಗ್ರಿಸ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂರ್ಭದಲ್ಲಿ ಬೀದರ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಅತ್ಯುತ್ತಮ ರ್ತವ್ಯ ನರ್ವಹಿಸುತ್ತಿರುವ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೆÇಲೀಸ್ ಅಧಿಕ್ಷಕರಾದ ಮಹೇಶ ಮೆಘಣ್ಣವರ, ಹುಮನಾಬಾದ ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಕೃಷ್ಣಪ್ಪ ಪಾಟೀಲ್, ಗುರು ಪಾಟೀಲ್, ಮಹೇಶ ಗೌಡ, ಪಿಎಸ್‍ಐ ಅಂಬರೀಶ್ ಸೇರಿದಂತೆ ಪೆÇಲೀಸ್ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.