ಬಸವರಾಜ್ ಜಾಬಶೆಟ್ಟಿ ಅವರ ಸರಳತೆಗೆಪಕ್ಷ ನಿಷ್ಠತೆಗೆ ಒಲಿದ ಉನ್ನತ ಹುದ್ದೆ. ಪ್ರೊ. ಬಿರಾದಾರ
ಬೀದರ್: ಮಾ. 13:ಬಸವರಾಜ್ ಜಾಬಶೆಟ್ಟಿ ಅವರು ಮೇರು ವ್ಯಕ್ತಿತ್ವವುಳ್ಳವರು ಅತ್ಯಂತ ಸರಳ ಜನಪರ ಸೇವಾ ಮನೋಭಾವನೆವುಳ್ಳ ಜನನಾಯಕರು ಸದಾಕಾಲ ಪ್ರಗತಿಪರ ಯೋಚನೆವುಳ್ಳವರಾಗಿದ್ದು ಜೊತೆಗೆ ಜನರಿಗೆ ಅತ್ಯಂತ ಹತ್ತಿರವಾದವರು ಅಹಂವಿಲ್ಲದೇ ಎಲ್ಲರನ್ನೂ ತೆಗೆದುಕೊಂಡು ಹೋಗುವ ವ್ಯಕ್ತಿತ್ವವುಳ್ಳವರಾಗಿರುವುದರಿಂದ್ದ ಘನ ಸರ್ಕಾರವು ಅವರಿಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರೀ.ಬಿ.ಎಸ್.ಬೀರಾದರ್ ನುಡಿದರು.
ಅವರು ನಗರದ ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮತ್ತು ನ್ಯಾಸ ಹಾಗೂ ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ಬೀದರ್ ವಿಶ್ವವಿದ್ಯಾಲಯ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಅವರನ್ನು ಬಹಳ ಹತ್ತಿರದಿಂದ ಗಮನಿಸುತ್ತೀರುವೆ.
ಬೀದರ್ ವಿಶ್ವವಿದ್ಯಾಲಯಕ್ಕೆ ಎಲ್ಲಾ ರೀತಿಯ ಸಹಕಾರ ಈ ಸಂಸ್ಥೆ ನೀಡುತ್ತಿದೆ ಜೊತೆಗೆ ಯಾವುದಕ್ಕೂ ಇಲ್ಲ ಎನ್ನದೇ ಅಭಿವೃದ್ಧಿಗೆ ಜೊತೆಯಾಗಿ ಸಹಕರಿಸುತ್ತಿದ್ದಾರೆ. ಇದೇ ಅವರ ಉದಾರ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಅವರು ಎತ್ತರ-ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಲಬುರಗಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪೆÇ್ರ. ಬಿ.ಜಿ. ಮೂಲಿಮನಿ ಅಭಿನಂದನಾ ನುಡಿಗಳನ್ನಾಡಿ ಜಾಬಶೆಟ್ಟಿಯವರು ಬಡವ-ಬಲ್ಲಿದ ಎಂಬ ಬೇದಭಾವವಿಲ್ಲದೆ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವ ಕೆ.ಆರ್.ಇ..ಸಂಸ್ಥೆಯ ಅಧ್ಯಕ್ಷರು ಸುಮಾರು ಸುದೀರ್ಘ 42 ವರ್ಷಗಳ ರಾಜಕೀಯ ಮತ್ತು ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾತಿನಲ್ಲಿ ವಿವರಿಸಲಾಗದು ಅವರ ಶೈಕ್ಷಣಿಕ ಕಾಳಜಿ ಪ್ರಾಧ್ಯಾಪಕರಿಗಿಂತಲು ಹೆಚ್ಚಿದೆ ಎಂದು ತೋರಿಸಿಕೊಡುತ್ತಿದೆ.
ಸದಾಕಾಲ ಸಮಯಕ್ಕೆ ಅನುಗುಣವಾಗಿ ಬದಲಾವಣೆ ತರುವುದರ ಮೂಲಕ ಹೊಸತನವನ್ನು ಆಲೋಚಿಸುವ ಮತ್ತು ಕಾರ್ಯರೂಪಕ್ಕೆ ತರುವ ನಾಯಕತ್ವವುಳ್ಳ ಜನನಾಯಕರಾಗಿದ್ದಾರೆ. ಕರ್ನಾಟಕ ಪದವಿ ಕಾಲೇಜಿಗೆ ಎ (ಪ್ಲಸ್) ತರುವಲ್ಲಿ ಅವರ ಪಾತ್ರ ಹಿರಿದಾಗಿದೆ. ಸದಾಕಾಲ ಒಳ್ಳೆಯ ಗುಣಾತ್ಮಕ ಶಿಕ್ಷಣವನ್ನು ಈ ಭಾಗದ ಜನರಿಗೆ ಸಿಗಬೇಕೆಂಬುದು ಇವರ ಆಶಯವಾಗಿದ್ದು ಅದರಂತೆ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಮಾಡಿದ್ದು ಮುಂದಿನ ದಿನಗಳಲ್ಲಿ ಜನರು ಅಪೇಕ್ಷಿಕ್ಕಿಂತ ಹೆಚ್ಚು ಅಭಿವೃದ್ಧಿ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಅಭಿನಂದನೆ ಸ್ವೀಕರಿಸಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಮಾತನಾಡಿ ಸುಮಾರು 42 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠವಂತ ಕಾರ್ಯಕರ್ತನಾಗಿ ಸೇವೆ ಮಾಡಿ ಎಂದಿಗೂ ಅಧಿಕಾರ ಆಸೆ ಪಟ್ಟವನಲ್ಲ ನನ್ನ ಗುರಿ ಅಭಿವೃದ್ಧಿ ಶ್ರೀ ಸಾಮಾನ್ಯರಿಗೆ ಬಡವರಿಗೆ ಆದಷ್ಟೂ ಸೇವೆ ಮಾಡಬೇಕೆಂಬ ಮಹಾದಾಸೆವುಳ್ಳವನು. ಪಕ್ಷನಿಷ್ಠತೆ ಮತ್ತು ಸೇವೆ ಪರಿಗಣಿಸಿ ನನ್ನನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದಾಗ ನಿಮಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇನೆ ನೀವು ಜನರು ಶಾಶ್ವತವಾಗಿ ನೆನಪಿಡುವಂತಹ ಕೆಲಸಗಳು ನಿಮ್ಮಿಂದ ಆಗಲಿ ಎಂದು ಶುಭ ಹಾರೈಸಿದರು ಅದರಂತೆ ಮುಂದಿನ ದಿನಗಳಲ್ಲಿ ಜನರ ಆಸೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಿ ಜಿ. ಶೆಟಕಾರ ಅಧ್ಯಕ್ಷತೆ ವಹಿಸಿ
ಮಾತನಾಡಿ ಬಸವರಾಜ ಜಾಬಶೆಟ್ಟಯವರಿಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಆ ಹುದ್ದೆಗೆ ಮತ್ತಷ್ಟು ಗೌರವ ಬಂದಂತಾಗಿದೆ ಜೊತೆಗೆ ನಮ್ಮ ಸಂಸ್ಥೆಗೂ ಹೆಮ್ಮೆ ತಂದಿದೆ ಮುಂದಿನ ದಿನಗಳಲ್ಲಿ ಅವರು ಉನ್ನತ ಹುದ್ದೆಗೆ ಏರಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಮ ಪಾರಾ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಲಕ್ಷೀ ನಿರೂಪಿಸಿದರು ಹಾಗೂ ಐ.ಟಿ.ಐ.ಕಾಲೇಜಿನ ಪ್ರಾಚಾರ್ಯ ವಿಜಯ್‍ಕುಮಾರ್ ವಂದಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳು ಸತೀಶ್ ಪಾಟೀಲ್ ಹಾಗೂ ನ್ಯಾಸದ ಕಾರ್ಯದರ್ಶಿಗಳಾದ ಮಡಿವಾಳಪ್ಪ ಗಂಗಶೆಟ್ಟಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.