ಸಂತ ಶ್ರೀ ಆಶಾರಾಮ ಬಾಪೂಜಿ ಬಿಡುಗಡೆಗೆ ಒತ್ತಾಯಿಸಿ ನಗರದಲ್ಲಿ ಬೃಹತ ಪ್ರತಿಭಟನೆ
ಬೀದರ:ಮಾ.13:ತೀವ್ರತಮವಾದ ಅನಾರೋಗ್ಯದಿಂದ ಬಳಲುತ್ತಿರುವ ವಯೋವೃದ್ದ ಹಿರಿಯ ಸಂತ ಶ್ರೀ ಆಶಾರಾಮ ಬಾಪೂಜಿಯವರನ್ನು ಕರ್ಯಗೃಹದಿಂದ ಬಿಡುಗಡೆಗೊಳಿಸಿ ಆಯುರ್ವೇದಿಕ ಚಿಕತ್ಸೆ ಪಡೆಯಲು ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಶ್ರೀ ಯೋಗ ವೇದಾಂತ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿತ್ತು.
ಇಲ್ಲಿಯ ಗಣೇಶ ಮೈದಾನದಿಂದ ಹೊರಟ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಕೈಯಲ್ಲಿ ಭಿತ್ತಿಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಾ ಮೋಹನ್ ಮಾರ್ಕೆಟ್, ಹರಳಯ್ಯ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿ ತೆರಳಿ ಸಮಾವೇಶಗೊಂಡಿತ್ತು.
ಈ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ರ್ಯಾಲಿ ಉದ್ದೇಶಿಸಿ ಹಿರಿಯ ಸಾಧಕರು ಮಾತನಾಡಿ, ಪೂರ್ವನಿಯೋಜಿತ ಸಂಚು ರೂಪಿಸಿ ಸುಳ್ಳು ಪ್ರಕರಣದ ದಾಖಲಿಸಿ ದೇಶದ ಮಹಾನ್ ಸಂತ ಆಶಾರಾಮ ಬಾಪುಜಿಯವರನ್ನು ಕಾರಾಗೃಹದಲ್ಲಿ ಬಂಧಿಸಿವುದು ಖಂಡನೀಯವಾಗಿದೆ ಎಂದರು.
ದೇಶದಲ್ಲೇ ಪ್ರಪಥಮ ಬಾರಿ ಸನಾತನ ಹಿಂದೂ ಧರ್ಮವನ್ನು ಜಾಗೃತಿ ಗೊಳಿಸುವ ಮುಖಾಂತರ ದೇಶ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆದು ಹಿಂದು ಧರ್ಮಕ್ಕೆ ಮರಳಿ ತಂದಿರುವುದೆ ಅವರು ಮಾಡಿದ ಅಪರಾಧವೆ? ಎಂದು ಪ್ರಶ್ನಿಸಿದರು.
ಪಾಶ್ಚಿಮಾತ್ಯ ಸಂಸ್ಕøತಿಗಳಿಗೆ ಮೊರೆಹೊಗುತ್ತಿರುವ ಯುವಕ ಯುವತಿಯರನ್ನು ಗುರು ದಿಕ್ಷೆ ನೀಡಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿ ಲಕ್ಷಾಂತರ ಯುವಕರ ಉಜ್ವಲ ಭವಿಷ್ಯ ರೂಪಿಸಲು ನಿರಂತರ ಪ್ರಯತ್ನ ಮಾಡಿದ ನಿರಪರಾಧಿ ಸಂತ ಶ್ರೀ ಆಶಾರಾಮ ಬಾಪೂಜಿಯವರಾಗಿದ್ದಾರೆ. ಇವರನ್ನು ಸುಮಾರು ಹನ್ನೆರಡು ವರ್ಷ ಕರ್ಯಗೃಹದಲ್ಲಿ ಇಡುವ ಮುಖಾಂತರÀ ಇಡೀ ಸನಾತನ ಹಿಂದೂಧರ್ಮಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದರು.
ಆಶಾರಾಮ ಬಾಪೂಜಿಯವರು ಭಾರತಿಯ ಸನಾತನ ಸಂಸ್ಕೃತಿಗೋಸ್ಕರ ಅನೇಕ ಸೇವೆಗಳನ್ನು ಮಾಡಿರುವರು, ಕಳೆದ ಹನ್ನೊಂದು ವರ್ಷಗಳಿಂದ ಕರ್ಯಗೃಹದಲಿದರೂ ಸಹ ಅವರ ಪ್ರೇರಣೆಯಿಂದ ಮಹಿಳಾ ಉತ್ಥಾನ ಮಂಡಲ, ಯುವಾ ಸೆವಾ ಸಂಘ, ಬಾಲಸಂಸ್ಕಾರ ಕೇಂದ್ರಗಳಂತ ಹ ಅವರ ಹಲವಾರು ಸಂಘಟನೆಗಳು ಸಕ್ರೀಯವಾಗಿದ್ದು, ಫೇ 14 ರಂದು ತಂದೆ ತಾಯಿ ಪೂಜೆಯ ದಿವಸ, 25ಡಿಸೆಂಬರ್‍ದಂದು ತುಳಸಿ ಪೂಜೆದಿವಸ, ದಿವ್ಯ ಶೀಶು ಗರ್ಭ ಸಂಸ್ಕಾರ,ಬಡವರು,ಆದಿವಾಸಿಗಳ ಕ್ಷೇತ್ರಗಳಲ್ಲಿ ಅನ್ನದಾಸೊಹ ,ವ್ಯಸನಮುಕ್ತ ಅಭಿಯಾನ, ಕನ್ಯಾ ಭ್ರೂಣ ಹತ್ಯೆ ತಡೆಯುವಂತಹ ಸಾಮಾಜಿಕ ಸೇವೆಗಳನ್ನು ನಿರಂತರ ದೇಶ ವಿದೇಶದಲ್ಲಿ ಹಮ್ಮಿಕೊಂಡು ಬರುತ್ತಿದ್ದಾರೆ ಎಂದರು.
ಕಾರಾಗೃಹಕ್ಕೆ ಹೋಗುವ ಮುಂಚೆ ದೇಶದಲ್ಲಿದ್ದ ಅವರ ಭಕ್ತರ ಸಂಖ್ಯೆ ಎರಡು ಕೋಟಿ ಇದ್ದಿದ್ದು ಇವತ್ತು ಏಳುಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದಾರೆ . ಆದರೂ ಸಹ ಸಮಸ್ಕಾರವಂತರಾದ ಅವರು ಯಾವುದೇ ರೀತಿಯ ಶಾಂತಿ ಭಂಗಕ್ಕೆ ಧಕ್ಕೆ ಬರುವಂತಹ ಕೆಲಸ ಏಲ್ಲಿಯೂ ಮಾಡಿಲ್ಲ. ಆದರೆ ಈಗ ಅವರ ಮೇಲೆ ಆಗುತ್ತಿರುವ ಅಮಾನವೀಯ ಮತ್ತು ಪಕ್ಷಪಾತದ ಅನ್ಯಾಯ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ದೇಶದಲ್ಲಿ ಮಹಾಮಾರಿ ಕರೊನಾ ಸೋಂಕಿನ ಸಮಯದಲ್ಲಿ ಜೈಲಿನಲಿದ್ದÀ 60 ವರ್ಷ ಮೇಲ್ಪಟ್ಟವರನ್ನು ಸರ್ಕಾರ ಸಾವಿರಾರು ಕೈದಿಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಬಾಪೂಜಿಯವರಿಗೆ ಬಿಡುಗಡೆ ಮಾಡದೇ ಅವರನ್ನು ಕಾರಾಗೃಹದಲ್ಲಿರಿಸಿ ಸರ್ಕಾರ ಅನ್ಯಾಯ ಮಾüಡಿದೆ ಎಂದು ಆರೋಪಿಸಿದರು.
ಸರ್ಕಾರ ಭಯೋತ್ಪಾದಕರನ್ನು,ದೇಶದ್ರೊಹಿಗಳನ್ನು, ಸಮಾಜ ಘಾತಕರನ್ನು ಪೆರೋಲ್ ಮೇಲೆ ಬೇಲ್ ಮೇಲೆ ಹಲವು ಸಾರಿ ಬಿಡುಗಡೆ ಮಾಡಿದೆ, ಅದರೆ ಯಾವುದೇ ಅಪರಾಧ ಮಾಡದ ನಿರಪರಾಧಿ ಸಂತ ಬಾಪುಜಿಯವರನ್ನು ಪರೋಲ್ ಮೇಲೆ ಸಹ ಬಿಡುಗಡೆ ಮಾಡÀದೇ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಇಗಲಾದರೂ ಕೇಂದ್ರ ಸರ್ಕಾರ ದೇಶದ ಕೋಟ್ಯಾಂತರ ಭಕ್ತರ ನೋವು ಅಕ್ರೋಶವನ್ನು ಗಮನಿಸಿ, ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂತ ಶ್ರೀ ಆಶಾರಾಮ ಬಾಪು ಅವರನ್ನು ತಕ್ಷಣವೆ ಜಾಮಿನು ಅಥವಾ ಪೆರೋಲ ಮೇಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರ್ಯಾಲಿಯಲ್ಲಿ ಅವರ ಭಕ್ತರು ಆಶಾರಾಮ್‍ಜಿರವರ ಅಪಾರ ಕೃಪೆ ತಮ್ಮ ಮೇಲಾಗಿದ್ದನ್ನು ನೆನೆದು ಅವರ ಈಗಿನ ವಿಷಮ ಅನಾರೋಗ್ಯಕ್ಕಾಗಿ ಕಣ್ಣೀರುಗರೆದರು. ಹಾಗೂ ಅವರು ಶೀಘ್ರ ಬಿಡುಗಡೆಗೊಂಡು ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಪ್ರತಿಭಟನಾ ರ್ಯಾಲಿಯಲ್ಲಿ ಸಂಜೀವಪಾಟೀಲ್ ನೇಮತಬಾದ, ಮಹಾದಯ್ಯ ಸ್ವಾಮಿ, ರೇವಣಸಿದ್ದ ಮಳಖೇಡ್, ಡಾ.ಸುರೇಂದ್ರ ರೋಡೆ ರಾಮಕೃಷ್ಣ ಸಾಳೆ,ಪಂಕಜಾಗಾಂಧಿ,ಕೀರ್ತಿವರ್ಧನ್,ಆನಂದ ಬಾವಗಿ,ಶಿವಕುಮಾರ ಪಾಂಚಾಳ,ಅಶೋಕ ದಾರಾ ಸೇರಿದಂತೆ ಜಿಲ್ಲೆಯ ಹಾಗೂ ನೆರೆ ರಾಜ್ಯ ವiಹಾರಾಷ್ಟ್ರದ ಉದಗೀರ ಲಾತೂರನ ನೂರಾರು ಭಕ್ತರು,ಅಭಿಮಾನಿಗಳುಶಿಷ್ಯಂದಿರು ಭಾಗವಹಿಸಿದ್ದರು.