ಗ್ರಾ.ಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ:ಅಧ್ಯಕ್ಷರಾಗಿ ಶಿವಯೋಗಿ ಸಿಂಗೆ ನೇಮಕ
ಅಫಜಲಪುರ:ಮಾ.13: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಪದಾಧಿಕಾರಿಗಳ ಆಯ್ಕೆ ಸಭೆಯು ಜಿಲ್ಲಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಲ್ಯಾಣ ಕರ್ನಾಟಕ ಸಂಘದ ಅಧ್ಯಕ್ಷರು, ತಾಲೂಕಾ ಪಂಚಾಯತ ಎಸ್.ಬಿ.ಎಂ ಸಮನ್ವಯ ಅಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಗ್ರಾ.ಪಂ ಮೇಲ್ವಿಚಾರಕರ ಸಮ್ಮುಖದಲ್ಲಿ ಸಭೆ ನಡೆಸಿ ನೂತನವಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ತಾಲೂಕಿನ ಗ್ರಾ.ಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾಗಿ ಶಿವಯೋಗಿ ಸಿಂಗೆ ಆನೂರ, ಉಪಾಧ್ಯಕ್ಷರಾಗಿ ವನಮಲಾ ಮಠಪತಿ ಗೊಬ್ಬೂರ, ಕಾರ್ಯದರ್ಶಿಯಾಗಿ ಶಿವಾನಂದ ಕುಂಬಾರ ರೇವೂರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀಮಂತ ಗೌಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಶರಣಗೌಡ ಪಾಟೀಲ ಪಟ್ಟಣ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಿರಾದಾರ, ಸಿದ್ರಾಮ್ ನಾಲವಾರ, ಕಲ್ಯಾಣಕರ್ನಾಟಕ ಸಂಘದ ಅಧ್ಯಕ್ಷ ಹಿರಗಪ್ಪ ಭಾಬನಕರ್, ವಿವಿಧ ಗ್ರಾ.ಪಂ ಮೇಲ್ವಿಚಾರಕರಾದ ಅಶೋಕ ದೊಡಮನಿ, ರಮೇಶ್ ಚವಾಣ್, ಗುರಪ್ಪ ಉಪ್ಪಾರ, ಯಲ್ಲಪ್ಪ ಭೈರಾಮಡಗಿ, ಸುರೇಖಾ ಫಿರಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.