ಕಾಶಿನಾಥಗೆ ರಾಜ್ಯ ಮಟ್ಟದ ಕಲಾ ರತ್ನ ಪ್ರಶಸ್ತಿ
ತಾಳಿಕೋಟೆ:ಮಾ.13: ಕಾಶೀನಾಥ ಕಾರಗನೂರ ಅವರಿಗೆ ಬೆಂಗಳೂರಿನ ಶುಕ್ರ ಅಡಿಟೊರಿಯಮ್‍ನಲ್ಲಿ ಎಸ್ ಎಸ್ ಕಲಾ ಸಂಗಮ ಸಂಸ್ಥೆ ವತಿಯಿಂದ ರವಿವಾರರಂದು ನಡೆದ ಸಮಾರಂಭದಲ್ಲಿ ಕಲಾ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಮತ್ತು ಚಲನಚಿತ್ರ ನಟ ಸ್ಮೈಲ್ ಶಿವಕುಮಾರ್ ಬಿ ಕೆ, ಡಾ|ಮುನಿರಾಜು, ಶ್ರೀಕಲಾ ಜ್ಯೋತಿ ಚಾರಿಟೇಬಲ್ ಟ್ರಸ್ಟ ನ ಅಧ್ಯಕ್ಷರಾದ ವಿಶೇಷ ಮಕ್ಕಳ ಪುಣ್ಯಶ್ರಮ ಉಪನಗರ ಕೆಂಗೇರಿಯ ಡಾ| ವಾಯ್ ಕೆ ವಿಜಯಲಕ್ಷ್ಮಿ, ಮತ್ತು ಚಲನಚಿತ್ರ ಹಿರಿಯ ನಟರಾದ ಶಶೀದರ್ ಕೋಟೆ, ಹಾಗು 117 ಬಾರಿ ರಕ್ತದಾನಮಾಡಿ ಗಿನ್ನಿಸ್ ವಿಶ್ವ ದಾಖಲೆ ಪ್ರಶಸ್ತಿ ವಿಜೇತರಾದ ಶ್ರೀಮತಿ ಮಧುರಾ ಅಶೋಕ್ ಕುಮಾರ್, ಜುನಿಯರ ವಿಷ್ಣು ನಾಗಬಸಯ್ಯ ಮಳಲಿಮಠ, ಅಂತರಾಷ್ಟ್ರೀಯ ಜನಪದ ಕಲಾವಿದೆ ಸವಿತಕ್ಕ, ಮೊದಲಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶ್ರೀ ಸಾಯಿ ಮೆಲೋಡಿ ಸಂಗೀತ ಕರೋಕೆ ಶಾಲೆಯ ಸಂಸ್ಥಾಪಕರಾಗಿ ಸುಮಾರು 8 ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿಭಾಯಿಸುತ್ತಾ ತಮ್ಮ ಕಲೆಯನ್ನು ಬಿತ್ತರಿಸುತ್ತಾ ಸಾಗಿರುವ ಕಾಶಿನಾಥ ಕಾರಗನೂರ ಅವರು ತಮ್ಮ ಸಂಗೀತ ಕಾರ್ಯವನ್ನು ಮಕ್ಕಳಿಗೆ ಸಂಗೀತ ತರಬೇತಿ ಹಾಗೂ ಗಾಯನ ತರಬೇತಿ ನೀಡುವ ಮೂಲಕ ಹೆಸರು ಮಾಡಿದ್ದಾರೆ ಕಾಶಿನಾಥ ಕಾರಗನೂರ ಅವರಿಗೆ ಈಗಾಗಲೇ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಸಂಸ್ಥೆಯಿಂದ ಕರ್ನಾಟಕ ಕಲಾ ಚೇತನ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ (ರಿ) ರಾಜ್ಯ ಘಟಕ ಗದಗ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಬೆಳ್ಳಿ ಸಂಭ್ರಮ ಪ್ರಶಸ್ತಿಗೆ ಭಾಜನರಾದವರಾಗಿದ್ದಾರೆ.