ಹುಮನಾಬಾದ್ ನಲ್ಲಿ ಮಾ. 15ರಂದು ಜನಸ್ಪಂದನ ಕಾರ್ಯಕ್ರಮ
ಹುಮನಾಬಾದ್: ಮಾ.13:ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ನೇತೃತ್ವದಲ್ಲಿ ಮಾ. 15ರಂದು ಜನಸ್ಪಂದನ ಆಯೋಜಿಸಲಾಗಿದೆ ಕಾರ್ಯಕ್ರಮ ಎಂದು ತಹಶೀಲ್ದಾರ್ ಅಂಜುಂ ತಬಸುಮ್ ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ಕಾರ್ಯಕ್ರಮದ ತಹಶೀಲ್ದಾರ್ ಜನಸ್ಪಂದನ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಜನ ಸ್ಪಂದನ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆಯಲಿದೆ.ಪುರಸಭೆ ಸೇರಿ ಒಟ್ಟು 19 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಆಗಮಿಸಲಿದ್ದು, ಅವರ ಪ್ರಯಾಣಕ್ಕಾಗಿ ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಸರಕಾರದಿಂದಲೇ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಬಸ್ ಸಂಚಾರದ ಹಿನ್ನಲೆ ಗ್ರಾಪಂ ಪಿಡಿಒಗಳಿಗೆ ಸಾರಿಗೆ ಸಂಸ್ಥೆಯವ್ಯವಸ್ಥಾಪಕರ ಮೊಬೈಲ್ ಸಂಖ್ಯೆ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆಯುವಂತೆ ಸೂಚಿಸಿದರು.
ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ. ಕಡ್ಡಾಯವಾಗಿ ಹಾಜರಿದ್ದು, ತಮ್ಮ ಇಲಾಖೆಗೆ ಸಂಬಂಧಿತ ಅರ್ಜಿ ವಿಲೇವಾರಿ ಸೇರಿ ಪ್ರಮುಖ ದಾಖಲೆಗಳೊಂದಿಗೆ ಹಾಜರಾಗಬೇಕು. ಹಾಜರಾಗಿದ್ದಲ್ಲಿ ಅಂತಹ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿ ಕಾರಿ ಡಾ. ಶಿವಕುಮಾರ ಸಿದ್ದೇಶ್ವರ, ಶಿಶು ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ ಹಿರೇಮಠ, ಸಮಾಜ ಕಲ್ಯಾಣ ಅಧಿಕಾರಿ ನಿಂಗರಾಜ ಅರಸು, ಕಾರ್ಮಿಕ ನಿರೀಕ್ಷಕ ಗಂಗಾಧರ, ಆಹಾರ ನಿರೀಕ್ಷಕಿ ಬಿಂದುಕುಮಾರಿ ಸೇರಿ ಅಧಿಕಾರಿಗಳು ಇದ್ದರು.