ಶಾಲೆಗೊಂದು ಚುಟುಕು ಗೋಷ್ಠಿಯಲ್ಲಿ ಮಕ್ಕಳು ಭಾಗವಹಿಸುತ್ತಿರುವುದು ಸಂತಸದ ಸಂಗತಿ : ಪ್ರಶಾಂತ ತೋಡಕರ
ಅಥಣಿ :ಮಾ.13: ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುತ್ತಿರುವ ಅಥಣಿ ಚುಟುಕು ಸಾಹಿತ್ಯ ಪರಿಷತ್ ಕಾರ್ಯ ಸ್ತುತ್ಯಾರ್ಹವಾದುದು. ತಾಲೂಕಿನಲ್ಲಿ ಜರುಗುತ್ತಿರುವ ಚುಟುಕು ಗೋಷ್ಠಿಯಲ್ಲಿ ಗಣನೀಯ ಪ್ರಮಾಣದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಚುಟುಕು ಗೋಷ್ಠಿಯು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯ ಜೊತೆಗೆ ಸತತವಾಗಿ ಮಕ್ಕಳಿಂದ ಕನ್ನಡ ಕಟ್ಟುವ ಕೆಲಸ ಆಗುತ್ತಿದೆ ಎಂದು ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಅವರು ಹೇಳಿದರು.
ಅವರು ಅಥಣಿ ಪಟ್ಟಣದ ಕೆ ಎಲ್ ಈ ಸಂಸ್ಥೆಯ ಯಶೋಧಾದೇವಿ ಗಂಗಾಧರ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಥಣಿ ಘಟಕ ಹಾಗೂ ಅಥಣಿ ತಾಲೂಕಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಶಾಲೆಗೊಂದು ಚುಟುಕುಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ನಾರಾಯಣ ಆನಿಕಿಂಡಿ ಅವರು ಮಾತನಾಡುತ್ತಾ ಸಾಹಿತ್ಯಆಸಕ್ತಿ ಕಡಿಮೆ ಆಗುತ್ತಿರುವ ಇಂದಿನ ದಿನಮಾನದಲ್ಲಿ ಶಾಲೆಯವರೆಗೆ ಬಂದು ಮಕ್ಕಳಿಗೆ ಪೆÇ್ರೀತ್ಸಾಹ ಕೊಟ್ಟು ಅವರೇ ಸ್ವಂತದ್ದಾಗಿ ಚುಟುಕು ರಚನೆ ಮಾಡಿಸಿ ಅವರಿಂದ ಹೇಳಿಸಿ ಬಹುಮಾನ ಕೊಡುತ್ತಿರುವ ಆಯೋಜಕರ ಕಾರ್ಯ ಶ್ಲಾಘನೀಯ ಮಕ್ಕಳ ಮೂಲಕ ಅಥಣಿ ನೆಲದಲ್ಲಿ ಸಾಹಿತ್ಯ ಪಸರಿಸುತ್ತಿರುವ ಸಂಘಟಕರಿಗೆ ಅಭಿನಂದಿಸಿದರು.
ಅಥಣಿ ಸಾಹಿತ್ಯ ಸಾಂಸ್ಕ್ರತಿಕ ಸಂಘದ ಅಧ್ಯಕ್ಷೆ ಪ್ರಿಯಂವದಾ ಅಣೆಪ್ಪನ್ನವರ ಮಾತನಾಡಿ ಕಟ್ಟಡಗಳು ಕಲೆ ಸಂಸ್ಕøತಿ ಬಿಂಬಿಸುತ್ತವೆ ಹಾಗೆ ಕಲೆ ಸಂಸ್ಕೃತಿಯ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಿಸುವವರೆ ಸಾಹಿತಿಗಳು ಅಂತಹ ಯುವ ಸಾಹಿತಿಗಳನ್ನು ನಿರ್ಮಾಣ ಮಾಡುತ್ತಿರುವ ಆಯೋಜಕರ ಕಾರ್ಯ ಶ್ಲಾಘನಿಯ ಎಂದರು.
ಈ ವೇಳೆ ಅಥಣಿ ಚುಟುಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಥಣಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ ಬಹುಮಾನ ಘೋಷಣೆ ಮಾಡಿದರು. ಅತಿಥಿಯಾಗಿ ಹಿರಿಯ ಸಾಹಿತಿ ಎಸ್ ಕೆ ಹೊಳೆಪ್ಪನ್ನವರ, ಹಾಗೂ ವಿಶೇಷ ಉಪಸ್ಥಿತರಾಗಿ ಪ್ರಾಂಶುಪಾಲರಾದ ಡಾ. ಆರ್. ಜಿ, ವಂಟಗುಡಿ ಮಾತನಾಡಿದರು,ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಶಿಧರ ಬರ್ಲಿ, ಪತ್ರಕರ್ತರಾದ ಲಕ್ಷ್ಮಣ ಕೋಳಿ, ಸಿದ್ದಾರೂಢ ಬಣ್ಣದ, ಸೇರಿದಂತೆ ಉಪನ್ಯಾಸಕರಾದ ಡಾ.ಆರ್ ಪಿ ಸಾಳವೆ, ಡಿ ಎಸ್ ಪಾಟೀಲ , ವಾಣಿ ದಾನಗೌಡ, ಎಮ್ ಎ ಮಠಪತಿ, ಬಿ ಆರ್ ಕಾಗವಾಡೆ, ಬಿ ಎಮ್ ಮಾಲಗಾಂವೆ ಇದ್ದರು. 97 ಜನ ಪ್ರಶಿಕ್ಷಣಾರ್ಥಿಗಳು ಚುಟುಕು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.